ADVERTISEMENT

ಬ್ರಿಟನ್ ರಾಣಿ ಎಲಿಜಬೆತ್ ಪತಿ, ರಾಜ ಫಿಲಿಪ್ ನಿಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 11:58 IST
Last Updated 9 ಏಪ್ರಿಲ್ 2021, 11:58 IST
ರಾಜ ಫಿಲಿಪ್
ರಾಜ ಫಿಲಿಪ್   

ಲಂಡನ್: ರಾಣಿ ಎಲಿಜಬೆತ್ II ಅವರ ಪತಿ ರಾಜ ಫಿಲಿಪ್ 99 ನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ಪ್ರಕಟಣೆ ತಿಳಿಸಿದೆ.

99 ವರ್ಷದ ರಾಜ ಫಿಲಿಪ್ ಅವರು ಇತ್ತೀಚೆಗಷ್ಚೇ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗೆ ಒಳಗಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತನ್ನ ಪ್ರೀತಿಯ ಪತಿ, ಡ್ಯೂಕ್ ಆಫ್ ಎಡಿನ್‌ಬರ್ಗ್-ಪ್ರಿನ್ಸ್ ಫಿಲಿಪ್ ಅವರು ಮೃತಪಟ್ಟಿರುವುದಾಗಿ ಘೋಷಿಸಿರುವ ರಾಣಿ ಎಲಿಜಬೆತ್, ಅವರ ಸಾವಿಗೆ ತೀವ್ರ ದುಃಖವಾಗಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

'ಅವರ ಪತಿ, ರಾಜ ಫಿಲಿಪ್ ಅವರು ಇಂದು ಬೆಳಗ್ಗೆ ವಿಂಡ್ಸರ್ ಕ್ಯಾಸಲ್‌ನಲ್ಲಿನಿಧನರಾದರು' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.