ADVERTISEMENT

ಸೋವಿಯತ್‌ ಭಿನ್ನಮತೀಯ ಬುಕೊವ್‌ಸ್ಕಿ ನಿಧನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 20:11 IST
Last Updated 28 ಅಕ್ಟೋಬರ್ 2019, 20:11 IST
ಬುಕೊವ್‌ಸ್ಕಿ
ಬುಕೊವ್‌ಸ್ಕಿ   

ಮಾಸ್ಕೊ (ಎಪಿ): ಸೋವಿಯತ್‌ ಕಾಲದ ಪ್ರಮುಖ ಭಿನ್ನಮತೀಯ ನಾಯಕ ವ್ಲಾಡಿಮಿರ್‌ ಬುಕೊವ್‌ಸ್ಕಿ(76) ಹೃದಯಾಘಾತದಿಂದನಿಧನರಾಗಿದ್ದಾರೆ.

ಸೋವಿಯತ್‌ ಮನೋವೈದ್ಯಶಾಸ್ತ್ರದ ದುರುಪಯೋಗವನ್ನು ಬಹಿರಂಗಪಡಿಸಲು ಶ್ರಮಿಸಿದ್ದ ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿದ್ದರು.1976ರಲ್ಲಿ ಸೋವಿಯತ್ ಒಕ್ಕೂಟದಿಂದ ಇವರನ್ನು ಗಡಿಪಾರು ಮಾಡಲಾಗಿತ್ತು. ನಂತರ ಇವರು ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು.

ಕಮ್ಯುನಿಸ್ಟ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಕ್ಕಾಗಿ ಇವರನ್ನು 12 ವರ್ಷ ಸೋವಿಯತ್‌ ಕಾರಾಗೃಹದಲ್ಲಿ ಇರಿಸಲಾಗಿತ್ತು.ಸೋವಿಯತ್ ಒಕ್ಕೂಟದಲ್ಲಿ ನಿಷೇಧಿಸಲಾಗಿದ್ದ ಪುಸ್ತಕಗಳು ಇವರ ಬಳಿ ಇದ್ದ ಕಾರಣ 1963ರಲ್ಲಿ ಮೊದಲ ಬಾರಿಗೆ ಬಂಧಿಸಲಾಗಿತ್ತು. ಬಳಿಕ ಇವರನ್ನು ಮಾನಸಿಕ ಅಸ್ವಸ್ಥರೆಂದು ಘೋಷಿಸಿ, ಆಸ್ಪತ್ರೆಗೂ ಸೇರಿಸಲಾಗಿತ್ತು.

ADVERTISEMENT

ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಯುವ ಸಂಘಟನೆಯನ್ನು ಟೀಕಿಸಿ ಪ್ರಬಂಧ ಬರೆದಿದ್ದ ಇವರನ್ನು 1961ರಲ್ಲಿ ಮಾಸ್ಕೊ ವಿಶ್ವವಿದ್ಯಾಲಯದಿಂದ ಹೊರಹಾಕಲಾಗಿತ್ತು. ಅಲ್ಲಿ ಇವರು ಜೀವವಿಜ್ಞಾನ ಅಧ್ಯಯನ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.