ADVERTISEMENT

ಕೆನಡಾ: ಕೋವಿಡ್‌ ಮಾರ್ಗಸೂಚಿಗಳ ವಿರುದ್ಧ ಹರಡಿದ ಪ್ರತಿಭಟನೆ ಕಾವು

ಏಜೆನ್ಸೀಸ್
Published 6 ಫೆಬ್ರುವರಿ 2022, 15:16 IST
Last Updated 6 ಫೆಬ್ರುವರಿ 2022, 15:16 IST
ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಶನಿವಾರ ಕೆನಡಾದ ಒಟ್ಟಾವಾದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಎಫ್‌ಪಿ ಚಿತ್ರ
ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಶನಿವಾರ ಕೆನಡಾದ ಒಟ್ಟಾವಾದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಎಫ್‌ಪಿ ಚಿತ್ರ   

ಒಟ್ಟಾವಾ: ಲಸಿಕೆ ಕಡ್ಡಾಯ ಆದೇಶಗಳು ಮತ್ತು ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಗೆ ಒಗ್ಗಟ್ಟಿನ ರೂಪವಾಗಿ ಕೆನಡಾದ ವಿವಿಧ ನಗರಗಳಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆಗಳು ಶಾಂತ ರೀತಿಯಲ್ಲಿ ನಡೆಯುವಂತೆಒಟ್ಟಾವಾ ಮತ್ತು ಹಲವಾರು ಪ್ರಾಂತೀಯ ನಗರಗಳಲ್ಲಿನ ಅಧಿಕಾರಿಗಳು ನಿಗಾ ವಹಿಸಿದರು.

ಒಟ್ಟಾವಾದಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ ಸಂಸತ್ತಿನ ಹಿಲ್‌ನ ಮುಂಭಾಗದ ಹಿಮದಿಂದ ಕೂಡಿದ ಹುಲ್ಲುಹಾಸಿನ ಮೇಲೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದರು. ಈ ವೇಳೆ ಅನೇಕರು ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.