ADVERTISEMENT

ಜರ್ಮನಿ ವಿರುದ್ಧ ವಿಜಯ ಸ್ಮರಣಾರ್ಥ | ಕಿಮ್‌ಗೆ ಪದಕ ನೀಡಿದ ಪುಟಿನ್

ವಿಜಯೋತ್ಸವದ 75ನೇ ವರ್ಷಾಚರಣೆ ಸ್ಮರಣೆಗಾಗಿ ಪದಕ

ಏಜೆನ್ಸೀಸ್
Published 6 ಮೇ 2020, 19:30 IST
Last Updated 6 ಮೇ 2020, 19:30 IST

ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್‌ ಅವರಿಗೆ ನಾಜಿ ಜರ್ಮನಿಯ ವಿರುದ್ಧ ವಿಜಯದ 75ನೇ ವರ್ಷಾಚರಣೆಯ ಸ್ಮರಣಾರ್ಥ ಎರಡನೇ ವಿಶ್ವ ಯುದ್ಧದ ಪದಕವನ್ನು ನೀಡಿದ್ದಾರೆ ಎಂದು ಪಯೋಂಗ್ಯಾಂಗ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.

ಉತ್ತರ ಕೊರಿಯಾ ಪ್ರದೇಶದಲ್ಲಿ ಮರಣ ಹೊಂದಿದ ಸೋವಿಯತ್ ಒಕ್ಕೂಟದ ಸೈನಿಕರ ಸ್ಮರಣೆಯನ್ನು ಕಾಪಾಡಿದ ಕಾರಣಕ್ಕಾಗಿ ಕಿಮ್ ಜಾಂಗ್ ಉನ್ ಅವರಿಗೆ ಈ ಪದಕವನ್ನು ನೀಡಲಾಗಿದೆ ಎಂದು ರಾಯಭಾರ ಕಚೇರಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಉತ್ತರ ಕೊರಿಯಾದಲ್ಲಿರುವ ರಷ್ಯಾದ ರಾಯಭಾರಿ ಅಲೆಕ್ಸಾಂಡರ್ ಮ್ಯಾಟ್ಸೆಗೊರಾ ಮಂಗಳವಾರ ಉ.ಕೊರಿಯಾದ ವಿದೇಶಾಂಗ ಸಚಿವ ರಿ ಸನ್ ಗ್ವಾನ್ ಅವರಿಗೆ ಪದಕ ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಕಿಮ್ ಗೈರು ಹಾಜರಾಗಿದ್ದರು.

ADVERTISEMENT

ವಿಜಯೋತ್ಸವದ 75ನೇ ವಾರ್ಷಿಕೋತ್ಸವದ ಮಿಲಿಟರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಕಳೆದ ವರ್ಷ ಪುಟಿನ್, ಕಿಮ್ ಅವರಿಗೆ ಮೇ 9ರಂದು ಮಾಸ್ಕೊಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಆದರೆ, ಕೊರೊನಾ ವೈರಸ್‌ನ ಕಾರಣದಿಂದಾಗಿ ಪುಟಿನ್ ಮಿಲಿಟರಿ ಮೆರವಣಿಗೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು.

2015ರಲ್ಲಿ ರಷ್ಯಾ, ಕಿಮ್ ಅವರನ್ನು70ನೇ ವಾರ್ಷಿಕೋತ್ಸವಕ್ಕೆ ಆಹ್ವಾನ ನೀಡಿತ್ತು. ಆದರೆ, ಕಿಮ್ ಈ ಆಹ್ವಾನವನ್ನು ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.