ADVERTISEMENT

ಉಕ್ರೇನ್‌ ಎಲ್ಲ ನಾಗರಿಕರಿಗೂ ರಷ್ಯಾ ಪೌರತ್ವ: ಪುಟಿನ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 15:54 IST
Last Updated 11 ಜುಲೈ 2022, 15:54 IST
ಪುಟಿನ್‌
ಪುಟಿನ್‌   

ಹಾರ್ಕಿವ್‌:ಉಕ್ರೇನಿನ ಎಲ್ಲ ಪ್ರಜೆಗಳಿಗೆ ರಷ್ಯಾದ ಪೌರತ್ವ ನೀಡುವ ತ್ವರಿತಗತಿಯ ಪ್ರಕ್ರಿಯೆಯ ಆದೇಶವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಸೋಮವಾರ ಹೊರಡಿಸಿದ್ದಾರೆ.

‌ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪ್ರಭಾವ ವಿಸ್ತರಿಸುವ ಸಲುವಾಗಿ ಪುಟಿನ್‌ ಈ ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿಯವರೆಗೆ ಡೊನೆಟ್‌ಸ್ಕ್‌, ಲುಹಾನ್‌ಸ್ಕ್‌, ದಕ್ಷಿಣ ಝಪೋರಿಝಿಯಾ, ಕೆರ್ಸನ್‌ ಪ್ರದೇಶ ಹಾಗೂ ರಷ್ಯಾ ಪ್ರಭಾವಿತ ಪ್ರದೇಶಗಳ ನಾಗರಿಕರಿಗೆ ಮಾತ್ರ ರಷ್ಯಾದ ಪೌರತ್ವ ನೀಡಲಾಗುತ್ತಿತ್ತು.

ಈಗ ಪೌರತ್ವ ಪ್ರಕ್ರಿಯೆ ಸರಳಗೊಳಿಸಿ, ಉಕ್ರೇನಿನ ಎಲ್ಲ ಪ್ರಜೆಗಳಿಗೆ ರಷ್ಯಾದ ಪೌರತ್ವ ನೀಡುವುದಾಗಿ ಪುಟಿನ್‌ ಘೋಷಿಸಿದ್ದಾರೆ. ಪುಟಿನ್‌ ಅವರ ಈ ನಿರ್ಧಾರಕ್ಕೆ ಉಕ್ರೇನ್‌ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.