ADVERTISEMENT

ಸಾಂಪ್ರದಾಯಿಕ ಕ್ರಿಸ್‌ಮಸ್‌: ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಿದ ಪುಟಿನ್

ರಾಯಿಟರ್ಸ್
Published 5 ಜನವರಿ 2023, 16:12 IST
Last Updated 5 ಜನವರಿ 2023, 16:12 IST
ವ್ಲಾಡಿಮಿರ್‌ ಪುಟಿನ್‌
ವ್ಲಾಡಿಮಿರ್‌ ಪುಟಿನ್‌   

ಮಾಸ್ಕೊ: ಉಕ್ರೇನ್‌ನಲ್ಲಿ ಸಾಂಪ್ರದಾಯಿಕ ಕ್ರಿಸ್‌ಮಸ್‌ ಆಚರಣೆ ನಡೆಯುವ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಕದನ ವಿರಾಮ ಘೋಷಿಸಿದ್ದಾರೆ ಎಂದು ರಷ್ಯಾ ಸಂಸತ್‌ ‘ಕ್ರೆಮ್ಲಿನ್‌’ ಗುರುವಾರ ತಿಳಿಸಿದೆ.

‘ಜ.6ರಂದು ಮಧ್ಯಾಹ್ನ 12 ರಿಂದ 36 ಗಂಟೆಗಳ ಕಾಲ ರಷ್ಯಾ ಯೋಧರು ಧಾರ್ಮಿಕ ವಿಧಿಗಳನ್ನು ಆಚರಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ’ ಎಂದು ಕ್ರೆಮ್ಲಿನ್ ಪ್ರಕಟಣೆ ತಿಳಿಸಿದೆ. ರಷ್ಯಾ ಹಾಗೂ ಉಕ್ರೇನ್‌ನಲ್ಲಿ ನೆಲೆಸಿರುವ ಸಂಪ್ರದಾಯಸ್ಥ ಕ್ರೈಸ್ತರು ಜ. 6 ಹಾಗೂ 7ರಂದು ಕ್ರಿಸ್‌ಮಸ್‌ ಆಚರಿಸುತ್ತಾರೆ.

ಆದರೆ, ರಷ್ಯಾದ ಈ ನಡೆಯು ಸಂಶಯಾಸ್ಪದವಾಗಿದೆ ಎಂದು ಉಕ್ರೇನ್‌ ಪ್ರತಿಕ್ರಿಯಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.