ADVERTISEMENT

ಮರಿಯುಪೋಲ್‌: 10 ಸಾವಿರಕ್ಕೂ ಹೆಚ್ಚು ಜನ ಬಲಿ

ಏಜೆನ್ಸೀಸ್
Published 12 ಏಪ್ರಿಲ್ 2022, 18:27 IST
Last Updated 12 ಏಪ್ರಿಲ್ 2022, 18:27 IST
ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ   

ಮಾಸ್ಕೊ: ಯಾವುದೇ ಕಾರಣಕ್ಕೂ ವಿದೇಶಿ ಶಕ್ತಿಗಳಿಗೆ ರಷ್ಯಾವನ್ನು ಏಕಾಂಗಿಯಾಗಿಸಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುಡುಗಿದ್ದಾರೆ.

ರಷ್ಯಾದ ಪೂರ್ವ ಭಾಗದಲ್ಲಿರುವ ‘ವೊಸ್ಟೊಚ್ನಿ’ ಬಾಹ್ಯಾಕಾಶ ಉಡ್ಡಯನ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ‘ರಷ್ಯಾ ತನ್ನಿಂತಾನೇ ಏಕಾಂಗಿಯಾಗಿರಲು ಇಚ್ಚಿಸುವುದಿಲ್ಲ. ಅದೇ ರೀತಿ ವಿಶ್ವದ ಯಾವುದೇ ದೇಶವೂ ರಷ್ಯಾವನ್ನು ಏಕಾಂಗಿಯಾಗಿಸಲು ಆಗದು. ಬೃಹತ್‌ ರಾಷ್ಟ್ರವಾದ ರಷ್ಯಾವನ್ನು ಒಂಟಿಯಾಗಿಸುವುದು ಅಸಾಧ್ಯ. ನಮ್ಮ ಜೊತೆಗೆ ಸಹಕಾರಿಸುವ ದೇಶಗಳೊಂದಿಗೆ ನಾವು ಕಾರ್ಯ ನಿರ್ವಹಿಸುತ್ತೇವೆ’ ಎಂದು ಅವರು ಹೇಳಿದರು.

ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಫೆಬ್ರುವರಿ 24ರ ಬಳಿಕಅಧ್ಯಕ್ಷ ಪುಟಿನ್ ಅವರು ರಾಜಧಾನಿ ಮಾಸ್ಕೊದ ಹೊರ ಭಾಗಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.