ಮಾಸ್ಕೊ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಬುಧವಾರ ಇಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್ ಹೇಳಿದೆ.
ಉಕ್ರೇನ್ ಜತೆಗೆ ಕದನ ವಿರಾಮ ಘೋಷಿಸುವಂತೆ ರಷ್ಯಾಕ್ಕೆ ಟ್ರಂಪ್ ನೀಡಿದ 50 ದಿನಗಳ ಗಡುವು ಶುಕ್ರವಾರ ಕೊನೆಗೊಳ್ಳ ಲಿರುವ ಕಾರಣದಿಂದ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಉಭಯ ದೇಶಗಳ ಮುಖಂಡರ ನಡುವೆ ಮೂರು ಗಂಟೆ ಸುದೀರ್ಘ ಮಾತುಕತೆ ನಡೆದಿದೆ. ಆದರೆ, ಮಾತುಕತೆ ಬಗ್ಗೆ ಎರಡೂ ದೇಶಗಳು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಯುದ್ಧ ನಿಲ್ಲಿಸದಿದ್ದರೆ ಇನ್ನಷ್ಟು ಆರ್ಥಿಕ
ನಿರ್ಬಂಧಗಳನ್ನು ಹೇರಲಾಗುವುದು, ರಷ್ಯಾದಿಂದ ತೈಲ ಖರೀದಿಸುತ್ತಿರುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಟ್ರಂಪ್
ಎಚ್ಚರಿಸಿದ್ದರು.
ಪುಟಿನ್ ಅವರ ವಿಶೇಷ ರಾಯಭಾರಿ ಕಿರಿಲ್ ಡಿಮಿಟ್ರಿವ್ ಅವರೊಂದಿಗೂ ಸ್ಟೀವ್ ವಿಟ್ಕಾಫ್ ಪ್ರತ್ಯೇಕ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.