ADVERTISEMENT

ಬ್ರಿಟನ್‌ ನೂತನ ಪ್ರಧಾನಿ ಟ್ರಸ್‌: ರಾಣಿ ಎಲಿಜಬೆತ್ ಅವರಿಂದ ನೇಮಕ

ಪಿಟಿಐ
Published 6 ಸೆಪ್ಟೆಂಬರ್ 2022, 14:46 IST
Last Updated 6 ಸೆಪ್ಟೆಂಬರ್ 2022, 14:46 IST
ಸ್ಕಾಟ್ಲೆಂಡ್‌ನಲ್ಲಿ ಮಂಗಳವಾರ ರಾಣಿ ಎಲಿಜಬೆತ್‌ ಅವರನ್ನು ಭೇಟಿ ಮಾಡಿದ ಲಿಜ್‌ ಟ್ರಸ್‌  –ಎಎಫ್‌ಪಿ ಚಿತ್ರ
ಸ್ಕಾಟ್ಲೆಂಡ್‌ನಲ್ಲಿ ಮಂಗಳವಾರ ರಾಣಿ ಎಲಿಜಬೆತ್‌ ಅವರನ್ನು ಭೇಟಿ ಮಾಡಿದ ಲಿಜ್‌ ಟ್ರಸ್‌  –ಎಎಫ್‌ಪಿ ಚಿತ್ರ   

ಲಂಡನ್‌: ಬ್ರಿಟನ್‌ನ ರಾಣಿ 2ನೇ ಎಲಿಜಬೆತ್‌ ಅವರು ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್‌ ಟ್ರಸ್ ಅವರನ್ನು ದೇಶದ ನೂತನ ಪ್ರಧಾನಿಯಾಗಿ ಮಂಗಳವಾರ ಔಪಚಾರಿಕವಾಗಿ ನೇಮಕ ಮಾಡಿದರು.

ಸ್ಕಾಟ್ಲೆಂಡ್‌ನ ಅಬೆರ್ಡೀನ್‌ಶೈರ್‌ನಲ್ಲಿರುವ ರಾಣಿ ಅವರ ಬಲ್‌ಮೊರಲ್‌ ಕ್ಯಾಸಲ್‌ ನಿವಾಸಕ್ಕೆ ತೆರಳಿದ ಲಿಜ್‌ ಟ್ರಸ್‌ ಅವರಿಗೆ 96 ವರ್ಷದ ರಾಣಿ ಎಲಿಜಬೆತ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಆಹ್ವಾನ ನೀಡಿದರು. ಇದಕ್ಕೆ ಮೊದಲು ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್‌ ಅವರು ರಾಜೀನಾಮೆ ಪತ್ರವನ್ನು ರಾಣಿ ಅವರಿಗೆ ಸಲ್ಲಿಸಿದ್ದರು.

ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಮಂಗಳವಾರ ಸಂಜೆಯೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಮೊದಲ ಭಾಷಣ ಮಾಡಿರುವ ಟ್ರಸ್‌ ಅವರು, ತಮ್ಮ ಸಚಿವ ಸಂಪುಟದ ಸದಸ್ಯರನ್ನು ಆಯ್ಕೆ ಮಾಡುವ ತಯಾರಿಯಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.