ADVERTISEMENT

ವಾಯುದಾಳಿ: 31 ನಾಗರಿಕರು ಸಾವು

ಏಜೆನ್ಸೀಸ್
Published 16 ಫೆಬ್ರುವರಿ 2020, 20:00 IST
Last Updated 16 ಫೆಬ್ರುವರಿ 2020, 20:00 IST

ದುಬೈ: ಯಮೆನ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 31 ನಾಗರಿಕರು ಸಾವನ್ನಪ್ಪಿದ್ದು, ಇರಾನ್ ಬೆಂಬಲಿತ ಹುತಿ ಬಂಡುಕೋರರು ಹೊಣೆ ಹೊತ್ತುಕೊಂಡಿದ್ದಾರೆ. ಈ ಮಧ್ಯೆ ಸೌದಿ ನೇತೃತ್ವದ ಪಡೆಗಳು ಪ್ರತಿಕಾರದ ದಾಳಿ ನಡೆಸಿವೆ ಎಂದು ವಿಶ್ವಸಂಸ್ಥೆ
ತಿಳಿಸಿದೆ.

ಉತ್ತರಭಾಗದ ಆಲ್‌–ಜವಾಪ್‌ ಪ್ರಾಂತ್ಯದಲ್ಲಿ ಸರ್ಕಾರಿ ಪಡೆಗಳು ನಡೆಸುತ್ತಿದ್ದ ಕಾರ್ಯಾಚರಣೆಗೆ ಸಹಾಯ ಮಾಡಲು ಟೊರಾಡೊ ವಿಮಾನ ಬಂದಿಳಿಯಿತು. ಈ ಪ್ರದೇಶದಲ್ಲಿ ಹುತಿ ಬಂಡುಕೋರರ ವಿರುದ್ಧ ದಾಳಿ ಆರಂಭಿಸಿದ್ದ ಸೌದಿ ನೇತೃತ್ವದ ಪಡೆಗಳು ವಿಮಾನದ ಮೇಲೆ ದಾಳಿ ನಡೆಸಿದವು ಎಂದು ಹೇಳಲಾಗಿದೆ.

ಆಲ್ ಹೈಜಾದಲ್ಲಿ ಪ್ರದೇಶದಲ್ಲಿ ನಡೆದ ವಾಯುದಾಳಿಯನ್ನು ಯಮೆನ್‌ನಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗವು ಖಚಿತಪಡಿಸಿದೆ.

ADVERTISEMENT

‘ದಾಳಿಯನ್ನು ವಿಭಾಗದ ಸಂಯೋಜಕಿ ಲಿಸ್ ಗ್ರಾಂಡೆ ಖಂಡಿಸಿದ್ದು, ನಾಗರಿಕರನ್ನು ರಕ್ಷಿಸುವ ಹೊಣೆಗಾರಿಕೆ ದೇಶಗಳಿಗೆ ಇರಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.