ADVERTISEMENT

ಪ್ರಧಾನಿ ಮೋದಿಗೆ ಬೆದರಿಕೆಯೊಡ್ಡಿದ್ದ ಪಾಕ್ ಗಾಯಕಿಯಿಂದ ಹೊಸ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 12:22 IST
Last Updated 5 ನವೆಂಬರ್ 2019, 12:22 IST
ರಬಿ ಪಿರ್‌ಜಾದಾ
ರಬಿ ಪಿರ್‌ಜಾದಾ   

ಲಾಹೋರ್: ಜಮ್ಮು -ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನರದ್ದು ಮಾಡಿದ ಬಳಿಕ ಪಾಕಿಸ್ತಾನದ ಗಾಯಕಿ ರಬಿ ಪಿರ್‌ಜಾದಾ ಭಾರತದ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ.

ತನ್ನ ಸುತ್ತ ಮೊಸಳೆ ಮತ್ತು ಹೆಬ್ಬಾವುಗಳನ್ನು ಹಾಕಿಕೊಂಡು ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ದ ಆಕೆ ಇದೀಗ ಹೊಸ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.

ರಬಿ ಪಿರ್‌ಜಾದಾಳ ನಗ್ನ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಮನರಂಜನಾ ಉದ್ಯಮವನ್ನು ತೊರೆಯಲು ನಿರ್ಧರಿಸಿರುವುದಾಗಿ ಸೋಮವಾರ ಹೇಳಿಕೊಂಡಿದ್ದಾರೆ.

ADVERTISEMENT

ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, ನಾನು ರಬಿ ಪಿರ್‌ಜಾದಾ ಶೋಬಿಜ್‌ನಿಂದ ಹೊರಬರುತ್ತಿದ್ದೇನೆ. ಅಲ್ಲಾಹು ನನ್ನ ತಪ್ಪುಗಳನ್ನು ಕ್ಷಮಿಸಲಿಮತ್ತು ನನ್ನ ಪರವಾಗಿ ಜನರ ಹೃದಯಗಳನ್ನು ಮೃದುಗೊಳಿಸಲಿ ಎಂದು ಹೇಳಿದ್ದಾರೆ.

ಕಳೆದ ವಾರವಷ್ಟೇ ರಬಿಯ ಖಾಸಗಿ ವಿಡಿಯೊ ಮತ್ತು ಫೋಟೊಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು. ಕಾಫ್ ಕಂಗನಾ ಸಿನಿಮಾದಲ್ಲಿನ ನೀಲಂ ಮುನೀರ್‌ರ ನೃತ್ಯವನ್ನು ಬೆಂಬಲಿಸಿದ್ದಕ್ಕಾಗಿ ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್‌ರನ್ನು ಟೀಕಿಸಿದ್ದರು. ಇದಾದ ಮರುದಿನವೇ ಗಾಯಕಿಯ ನಗ್ನ ವಿಡಿಯೊ ಮತ್ತು ಫೋಟೊಗಳು ಸೋರಿಕೆಯಾಗಿ ವೈರಲ್ ಆಗಿದ್ದವು.

ಪ್ರತೀಕಾರವಾಗಿ ರಬಿಯ ವಿಡಿಯೊಗಳನ್ನು ಆಸಿಫ್ ಗಫೂರ್ ಅವರೇ ಬಿಡುಗಡೆ ಮಾಡಿಸಿದ್ದಾರೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದರು. ಈ ಕುರಿತು ರಬಿಯು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ ದೂರು ನೀಡಿದ್ದರು. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿಗೆ ಬೆದರಿಕೆಯೊಡ್ಡಿದ್ದ ರಬಿ, ಆತ್ಮಹತ್ಯಾ ದಾಳಿ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದರು. ಆತ್ಮಹತ್ಯೆ ಜಾಕೆಟ್ ತೊಟ್ಟಿರುವ ಫೋಟೊ ಶೇರ್ ಮಾಡಿ, ಕಾಶ್ಮೀರ ಸಮಸ್ಯೆ ಕುರಿತಾಗಿ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿ,#ModiHitler ಎಂಬ ಹ್ಯಾಷ್‌ಟ್ಯಾಗ್ ಹಾಕಿ ಕ್ಯಾಪ್ಶನ್ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.