ADVERTISEMENT

ನೇಪಾಳ ಉಪಾಧ್ಯಕ್ಷರಾಗಿ ರಾಮ್‌ಸಹಾಯ್‌ ಪ್ರಸಾದ್‌ ಯಾದವ್‌ ಪ್ರಮಾಣವಚನ ಸ್ವೀಕಾರ

ಪಿಟಿಐ
Published 20 ಮಾರ್ಚ್ 2023, 12:27 IST
Last Updated 20 ಮಾರ್ಚ್ 2023, 12:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಠ್ಮಂಡು: ಹಿರಿಯ ಮಾಧೇಸಿ ಸಮುದಾಯದ ನಾಯಕ, ಜನತಾ ಸಮಾಜವಾದಿ ಪಕ್ಷದ (ಜೆಎಸ್‌ಪಿ) ರಾಮ್‌ಸಹಾಯ್‌ ಪ್ರಸಾದ್‌ ಯಾದವ್‌ ಅವರು ನೇಪಾಳದ ಮೂರನೇ ಉಪಾಧ್ಯಕ್ಷರಾಗಿ ಸೋಮವಾರ ಇಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನ ‘ಶೀತಲ್ ನಿವಾಸ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಪಾಳದ ಅಧ್ಯಕ್ಷ ರಾಮ ಚಂದ್ರ ಪೌಡೆಲ್‌ ಅವರು ಯಾದವ್‌ ಅವರಿಗೆ ಪ್ರಮಾಣವಚನ ಭೋಧಿಸಿದರು.

ನೇಪಾಳಿ ಉಡುಗೆ ತೊಟ್ಟಿದ್ದ ಯಾದವ್‌ ಅವರು ನೇಪಾಳಿ ಭಾಷೆಯಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದರು. ಪ್ರಧಾನಿ ಪುಷ್ಪ ಕಮಲ್ ದಹಲ್ , ಸ್ಪೀಕರ್ ದೇವ್‌ ರಾಜ್ ಘಿಮಿರೆ, ಮಾಜಿ ಪ್ರಧಾನಮಂತ್ರಿಗಳು, ಸಚಿವರು ಮತ್ತು ಸಂಸದರು ಉಪಸ್ಥಿತರಿದ್ದರು.

ADVERTISEMENT

ರಾಮ್‌ಸಹಾಯ್‌ ಅವರಲ್ಲದೆ ಸಿಪಿಎನ್‌– ಯುಎಂಎಲ್‌ ಅಭ್ಯರ್ಥಿ ಅಷ್ಟಲಕ್ಷ್ಮೀ ಶಕ್ಯ, ಜನಮತ ಪಕ್ಷದ ಪರಿಮಳ ಯಾದವ್‌ ಮತ್ತು ಮಮತಾ ಝಾ ಅವರು ಕಣದಲ್ಲಿದ್ದರು. 30,328 ಮತಗಳನ್ನು ಪಡೆದಿದ್ದ ರಾಮ್‌ಸಹಾಯ್‌ ಅವರು 16,328 ಮತಗಳನ್ನು ಪಡೆದ ಶಕ್ಯ ಅವರೆದುರು ವಿಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.