ADVERTISEMENT

‘ಕ್ವಾಡ್‌’ ಶೃಂಗಸಭೆಯಲ್ಲಿ ಜಾಗತಿಕ ಸಮಸ್ಯೆಗಳ ಚರ್ಚೆ: ಶ್ವೇತಭವನ

ಪಿಟಿಐ
Published 10 ಮಾರ್ಚ್ 2021, 6:39 IST
Last Updated 10 ಮಾರ್ಚ್ 2021, 6:39 IST
ಶ್ವೇತಭವನ
ಶ್ವೇತಭವನ   

ವಾಷಿಂಗ್ಟನ್‌: ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕದ ನಾಯಕರನ್ನು ಒಳಗೊಂಡ ‘ಕ್ವಾಡ್‌’ ಶೃಂಗಸಭೆ ಶುಕ್ರವಾರ ನಡೆಯಲಿದ್ದು, ಕೋವಿಡ್‌–19ರ ಸವಾಲು, ಆರ್ಥಿಕ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆ ಸೇರಿದಂತೆ ವಿವಿಧ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆಎಂದು ಶ್ವೇತಭವನ ತಿಳಿಸಿದೆ.

ಅಧ್ಯಕ್ಷ ಜೋ ಬೈಡನ್‌ ಅವರು ಇದಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಇಂಡೊ–ಪೆಸಿಫಿಕ್‌ ವಲಯದಲ್ಲಿ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರ ಜತೆಗೆ ನಿಕಟ ಸಹಕಾರಕ್ಕೆ ಆದ್ಯತೆ ನೀಡಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೋವಿಡ್‌–19ನಿಂದ ಜಾಗತಿಕವಾಗಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಅಗತ್ಯವಿರುವ ಆರ್ಥಿಕ ಸಹಕಾರದಿಂದ ಹಿಡಿದು ಹವಾಮಾನ ಬಿಕ್ಕಟ್ಟಿನವರಿಗೆ ವಿವಿಧ ಸವಾಲುಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಬೇಕು ಎಂಬುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ADVERTISEMENT

ವರ್ಚುವಲ್‌ ಸ್ವರೂಪದಲ್ಲಿ ಸಭೆ ನಡೆಯಲಿದೆ. ಈ ವೇಳೆ ಭಾರತದ ಘೋಷಣೆಯ ಬಳಿಕ, ಅಧ್ಯಕ್ಷ ಜೋ ಬೈಡನ್‌ ಅವರು ಜಪಾನ್‌ನ ಪ್ರಧಾನಿ ಯೋಶಿಯಿದೆ ಸುಗಾ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

2004ರ ಸುನಾಮಿ ನಂತರ ‘ಕ್ವಾಡ್‌’ (ಕ್ವಾಡ್ರಿಲ್ಯಾಟರಲ್‌ ಏಷ್ಯನ್ ಆರ್ಚ್ ಆಫ್‌ ಡೆಮಾಕ್ರಸಿ)ರೂಪುಗೊಂಡಿತು. 2007ರಿಂದ ಈ ಸಂಘಟನೆಗೆ ಸ್ಪಷ್ಟ ರೂಪ ನೀಡಲಾಯಿತು. ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಮಟ್ಟದಲ್ಲಿ ನಿಯಮಿತವಾಗಿ ಕ್ವಾಡ್‌ ಸಭೆಗಳು ನಡೆಯುತ್ತಿದ್ದವು. ಇದೇ ಮೊದಲ ಬಾರಿಗೆ ಶುಕ್ರವಾರ ಈ ದೇಶಗಳ ನಾಯಕರ ಹಂತದ ಸಭೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.