ADVERTISEMENT

ಭಾರತದೊಂದಿಗಿನ ಬಾಂಧವ್ಯ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ: ಪೆಂಟಗನ್

ಪಿಟಿಐ
Published 16 ಆಗಸ್ಟ್ 2024, 3:26 IST
Last Updated 16 ಆಗಸ್ಟ್ 2024, 3:26 IST
<div class="paragraphs"><p>ಭಾರತ ಮತ್ತು ಯುಎಸ್‌ ರಾಷ್ಟ್ರಧ್ವಜ&nbsp; </p></div>

ಭಾರತ ಮತ್ತು ಯುಎಸ್‌ ರಾಷ್ಟ್ರಧ್ವಜ 

   

ವಾಷಿಂಗ್ಟನ್‌: 'ಭಾರತದೊಂದಿಗಿನ ಬಾಂಧವ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇಂಡೋ – ಪೆಸಿಫಿಕ್‌ ಭಾಗಕ್ಕೂ ಇದು ಬಹಳ ಮಹತ್ವದ್ದಾಗಿದೆ' ಎಂದು ಯುಎಸ್‌ ಸೇನೆಯ ಪ್ರಧಾನ ಕಚೇರಿ 'ಪೆಂಟಗನ್‌' ಹೇಳಿದೆ.

ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಆಗಸ್ಟ್‌ 23ರಂದು ಪೆಂಟಗನ್‌ಗೆ ಭೇಟಿ ನೀಡಲಿದ್ದು, ಯುಎಸ್‌ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಅಸ್ಟಿನ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಪೆಂಟಗನ್‌ ಉಪ ಮಾಧ್ಯಮ ಕಾರ್ಯದರ್ಶಿ ಸಬ್ರಿನಾ ಸಿಂಗ್‌, ಮುಂಬರುವ ಭೇಟಿ ವೇಳೆ, ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಸಾಧ್ಯವಿರುವ ಎಲ್ಲ ರೀತಿಯ ಮಾತುಕತೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಚಾರಗಳು ಮತ್ತು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಂಬಂಧ ಬಲಪಡಿಸುವ ಮಾರ್ಗಗಳ ಬಗ್ಗೆ ಉಭಯ ನಾಯಕರು ವ್ಯಾಪಕ ಚರ್ಚೆ ನಡೆಸುವ ಸಾಧ್ಯತೆ ಇದೆ. ಆದರೆ, ಸಭೆಯ ಬಗ್ಗೆ ಸಬ್ರಿನಾ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ.

ರಾಜನಾಥ್‌ ಸಿಂಗ್‌ ಅವರು, ಈ ವರ್ಷದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಯುಎಸ್‌ಗೆ ಭೇಟಿ ನೀಡುತ್ತಿರುವ ಭಾರತದ ಅತ್ಯುನ್ನತ ಶ್ರೇಣಿಯ ಸಚಿವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.