ADVERTISEMENT

ಇಸ್ಲಾಮಿಕ್ ಉಗ್ರವಾದ ನಿರ್ಮೂಲನೆ: ರಿಷಿ ಸುನಕ್ ಶಪಥ

ಪಿಟಿಐ
Published 3 ಆಗಸ್ಟ್ 2022, 10:29 IST
Last Updated 3 ಆಗಸ್ಟ್ 2022, 10:29 IST
ರಿಷಿ ಸುನಕ್
ರಿಷಿ ಸುನಕ್   

ಲಂಡನ್: ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದರೆ ಇಸ್ಲಾಮಿಕ್ ಉಗ್ರವಾದವನ್ನು ಸದೆಬಡಿಯುವುದಾಗಿ ಅಭ್ಯರ್ಥಿ ರಿಷಿ ಸುನಕ್‌ ಬುಧವಾರ ಶಪಥ ಮಾಡಿದ್ದಾರೆ.

‘ಒಬ್ಬ ಪ್ರಧಾನಿಗೆ ದೇಶವನ್ನು ಹಾಗೂ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಇಡುವುದಕ್ಕಿಂತ ಮಹತ್ವದ ಕೆಲಸ ಬೇರೆ ಯಾವುದೂ ಇಲ್ಲ. ಹೀಗಾಗಿ ಇಸ್ಲಾಮಿಕ್‌ ಉಗ್ರವಾದವನ್ನು ಬೇರು ಸಮೇತ ಕಿತ್ತೊಗೆಯಲು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ರಿಷಿ ಸುನಕ್‌ ಪರ ಪ್ರಚಾರಾಂದೋಲನ ನಡೆಸುತ್ತಿರುವ ‘ರೆಡಿ4ರಿಷಿ’ ಎಂಬ ತಂಡ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದು, ಸುನಕ್‌ ಅವರ ಆದ್ಯತೆಗಳನ್ನು ವಿವರಿಸಲಾಗಿದೆ.

ADVERTISEMENT

‘ಬ್ರಿಟನ್‌ ಎದುರಿಸುತ್ತಿರುವ ಪ್ರಮುಖ ಬೆದರಿಕೆಗಳಲ್ಲಿ ಇಸ್ಲಾಮಿಕ್ ಉಗ್ರವಾದವೂ ಒಂದು. ಈಗಿರುವ ಕಾಯ್ದೆಗಳಿಗೆ ಮತ್ತಷ್ಟು ಬಲ ತುಂಬುವ ಮೂಲಕ ಈ ಉಗ್ರವಾದವನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂಬುದಾಗಿ ಸುನಕ್‌ ಅವರು ಹೇಳಿರುವುದನ್ನು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

‘ಮಾನಸಿಕ ಆರೋಗ್ಯ ಸೇವೆಗಳನ್ನು ಉತ್ತಮಪಡಿಸಲು ಸಹ ಸುನಕ್ ಅವರು ಯೋಜನೆಗಳನ್ನು ಹೊಂದಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಹಾಗೂ ತೀವ್ರಗಾಮಿ ಮನಸ್ಥಿತಿ ಹೊಂದಿರುವವರ ನಡುವಿನ ವ್ಯತ್ಯಾಸ ಗುರುತಿಸಲು ಇದರಿಂದ ಸಾಧ್ಯವಾಗಲಿದೆ’ ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.