ಬೀಜಿಂಗ್ (ಎಪಿ): ‘ನೈಋತ್ಯ ಚೀನಾದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇಲ್ಲಿನ ಜನಪ್ರಿಯ ಪ್ರವಾಸಿ ಸ್ಥಳವಾದಪೆಂಗ್‌ಝೌ ಬಳಿಯ ನದಿಯೊಂದರ ರಭಸಕ್ಕೆ ಏಳು ಜನರು ಸಾವನ್ನಪ್ಪಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡುವಿನ ಉತ್ತರಕ್ಕೆ ಇರುವ ಪೆಂಗ್‌ಝೌನ ಸುಮಾರು 70 ಕಿ.ಮೀ. ಪ್ರದೇಶ ಪ್ರವಾಸಿ ತಾಣವಾಗಿದೆ.
ನದಿಯಲ್ಲಿನ ರಭಸ ಹೆಚ್ಚಾದ ಕೂಡಲೇ ಜನರು ಸ್ಥಳದಿಂದ ಓಡಿಹೋಗಲು ಪರದಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೊಗಳು ತೋರಿಸಿದ್ದವು. ಆದರೆ ಒಂದು ಗಂಟೆಯ ಬಳಿಕ ನದಿಯ ರಭಸಕ್ಕೆ ಹಲವರು ಸಿಲುಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.