ADVERTISEMENT

ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನೇಪಾಳಿ ಕಾಂಗ್ರೆಸ್

ನೇಪಾಳದಲ್ಲಿ ಹೊಸ ಸರ್ಕಾರದ ರಚಿಸುವ ಅವಕಾಶ

ಪಿಟಿಐ
Published 5 ಡಿಸೆಂಬರ್ 2022, 12:57 IST
Last Updated 5 ಡಿಸೆಂಬರ್ 2022, 12:57 IST
 ಶೇರ್ ಬಹದ್ದೂರ್ ದೇವುಬಾ
 ಶೇರ್ ಬಹದ್ದೂರ್ ದೇವುಬಾ   

ಕಠ್ಮಂಡು: ನೇಪಾಳದ ಸಂಸತ್‌ಗೆ ನಡೆದ ನೇರ ಚುನಾವಣೆಯ ಮತ ಎಣಿಕೆ ಕಾರ್ಯವು ಸೋಮವಾರ ಪೂರ್ಣಗೊಂಡಿದ್ದು, ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್ 57 ಸ್ಥಾನಗಳನ್ನು ಪಡೆಯುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಹೊಸ ಸರ್ಕಾರವನ್ನು ರಚಿಸುವ ಪಕ್ಷದ ಅವಕಾಶವು ಉಜ್ವಲವಾದಂತಾಗಿದೆ.

ನೇಪಾಳದ ಚುನಾವಣಾ ಆಯೋಗದ ಪ್ರಕಾರ, ನೇಪಾಳಿ ಕಾಂಗ್ರೆಸ್ ನೇರ ಚುನಾವಣೆಯಲ್ಲಿ 57 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದು, ನೇಪಾಳ ಕಮ್ಯುನಿಸ್ಟ್ ಪಕ್ಷ (ಸಿಪಿಎನ್–ಯುಎಂಎಲ್) 44 ಸ್ಥಾನಗಳನ್ನು ಗಳಿಸಿದೆ ಹಾಗೂ ನೇಪಾಳ ಕಮ್ಯುನಿಸ್ಟ್ ಪಕ್ಷ ಮಾವೋವಾದಿ (ಸಿಪಿಎನ್‌–ಎಂ) ಹಾಗೂ ನೇಪಾಳ ಕಮ್ಯುನಿಸ್ಟ್ ಪಕ್ಷ ಸಮಾಜವಾದಿ ಬಣಗಳು ಕ್ರಮವಾಗಿ 18 ಮತ್ತು 10 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಸುದೀರ್ಘ ರಾಜಕೀಯ ಅಸ್ಥಿರತೆಯನ್ನು ಕೊನೆಗೊಳಿಸುವ ಸಲುವಾಗಿ ನೇಪಾಳದ ಸಂಸತ್ ಹಾಗೂ ಏಳು ವಿಧಾನಸಭಾ ಕ್ಷೇತ್ರಗಳಿಗೆ ನ. 20ರಂದು ಚುನಾವಣೆ ನಡೆದಿತ್ತು. ಮತದಾನದ ಒಂದು ದಿನದ ಬಳಿಕ ಮತ ಎಣಿಕೆ ಕಾರ್ಯ ಆರಂಭವಾಗಿತ್ತು.

ADVERTISEMENT

ಒಟ್ಟು275 ಸದಸ್ಯ ಸ್ಥಾನಗಳ ನೇಪಾಳ ಸಂಸತ್ತಿನ 165 ಸದಸ್ಯರನ್ನು ನೇರ ಚುನಾವಣೆ ಮೂಲಕ ಆರಿಸಲಾಗುವುದು ಮತ್ತು ಬಾಕಿ 110 ಸದಸ್ಯರು ಪರೋಕ್ಷ ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆ ಆಗುವರು.ಬಹುಮತ ಪಡೆಯಲು ಒಂದು ಪಕ್ಷವು 138 ಸ್ಥಾನಗಳನ್ನು ಗೆಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.