ADVERTISEMENT

ಮ್ಯಾನ್ಮಾರ್ ಬಿಕ್ಕಟ್ಟು ಕುರಿತ ಭದ್ರತಾ ಮಂಡಳಿ ಹೇಳಿಕೆಗೆ ರಷ್ಯಾ, ಚೀನಾ ಅಡ್ಡಿ

Russia and China block UN statement on Myanmar crisis

ಏಜೆನ್ಸೀಸ್
Published 28 ಮೇ 2022, 12:37 IST
Last Updated 28 ಮೇ 2022, 12:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಮ್ಯಾನ್ಮಾರ್‌ನಲ್ಲಿನ ಹಿಂಸಾಚಾರ ಮತ್ತು ಗಂಭೀರ ಸ್ವರೂಪದ ಮಾನವೀಯ ಪರಿಸ್ಥಿತಿ ಕುರಿತಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೇಳಿಕೆಗೆ ಚೀನಾ ಮತ್ತು ರಷ್ಯಾಗಳು ಅಡ್ಡಿಪಡಿಸಿವೆ.

2021ರ ಫೆಬ್ರುವರಿ 1ರಿಂದ ಸೇನೆಯ ಕ್ಷಿಪ್ರಕ್ರಾಂತಿಯಿಂದಾಗಿಮ್ಯಾನ್ಮಾರ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಕೈಗೊಳ್ಳಲಾಗುತ್ತಿರುವ ಯತ್ನಗಳ ಬಗ್ಗೆ ಕಾಂಬೋಡಿಯಾದ ವಿದೇಶಾಂಗ ಸಚಿವ ಪ್ರಾಕ್ ಸೊಖೊನ್ ಮತ್ತು ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆಯ ರಾಯಭಾರಿ ನೊಲೀನ್ ಹೆಯ್ಝೆರ್ ಅವರು ಭದ್ರತಾ ಮಂಡಳಿಗೆ ಮಾಹಿತಿ ನೀಡಿದರು. ಪ್ರಾಕ್ ಸೊಖೊನ್ ಅವರುಮ್ಯಾನ್ಮಾರ್‌ಗೆ ವಿಶೇಷ ರಾಯಭಾರಿಯಾಗಿದ್ದಾರೆ.

2021ರ ಫೆಬ್ರುವರಿ 1ರಂದು ಚುನಾವಣೆ ಮೂಲಕ ಅಧಿಕಾರಕ್ಕೆ ಬಂದಿದ್ದ ಡೆಮಾಕ್ರಸಿ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರ ಸರ್ಕಾರವನ್ನು ಸೇನೆ ತನ್ನ ವಶಕ್ಕೆ ಪಡೆದಿತ್ತು. ಅಲ್ಲದೆ, ಸೂಕಿ ಅವರ ಪಕ್ಷವು ವ್ಯಾಪಕ ವಂಚನೆ ಮೂಲಕ2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿದೆ ಎಂದು ಸೇನೆ ಹೇಳಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.