ADVERTISEMENT

ಉಕ್ರೇನ್‌ ಸೈನಿಕರಿಗೆ ರಷ್ಯಾದಿಂದ 21 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 14:27 IST
Last Updated 17 ಅಕ್ಟೋಬರ್ 2025, 14:27 IST
   

ಕೀವ್: ಸೆರೆಹಿಡಿದಿದ್ದ 15 ಮಂದಿ ಉಕ್ರೇನ್‌ ಸೈನಿಕರಿಗೆ ದಕ್ಷಿಣ ರಷ್ಯಾದ ನ್ಯಾಯಾಲಯ ಶುಕ್ರವಾರ ಭಯೋತ್ಪಾದನೆ ಆರೋಪದ ಮೇಲೆ ವಿಚಾರಣೆ ನಡೆಸಿ, ಅಕ್ಟೋಬರ್ 15ರಿಂದ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕ್ರಮವನ್ನು ಖಂಡಿಸಿರುವ ಉಕ್ರೇನ್‌ ‘ಇದೊಂದು ನಾಚಿಕೆಗೇಡು ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ’ ಎಂದು ಹೇಳಿದೆ.

ರಷ್ಯಾ ಘೋಷಿತ ಭಯೋತ್ಪಾದಕ ಸಂಘಟನೆ ಐಡರ್ ಬೆಟಾಲಿಯನ್‌ನ 15 ಮಂದಿಗೆ ರಾಸ್ಟೋವ್‌–ಆನ್–ಡಾನ್‌ ಸೇನಾ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2023ರಿಂದಲೂ ವಿಚಾರಣೆ ನಡೆಯುತ್ತಿತ್ತು.

‘ತಮ್ಮ ನೆಲದ ರಕ್ಷಣೆಗೆ ಹೋರಾಡುವವರನ್ನು ರಷ್ಯಾ ಅಪರಾಧಿಗಳಂತೆ ನೋಡುತ್ತಿದೆ’ ಎಂದು ಉಕ್ರೇನ್‌ ಮಾನವ ಹಕ್ಕುಗಳ ರಾಯಭಾರಿ ಮಿಟ್ರೊ ಲ್ಯೂಬಿನೆಟ್ಸ್‌ ಟೀಕಿಸಿದ್ದಾರೆ. ರಷ್ಯಾದ ಮಾನವ ಹಕ್ಕು ಹೋರಾಟಗಾರರೂ ರಷ್ಯಾ ನಡೆಯನ್ನು ಖಂಡಿಸಿದ್ದಾರೆ.

ADVERTISEMENT

ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡುತ್ತಿದ್ದ ಅಝೋವ್ ಮತ್ತು ಐಡರ್ ಸಂಘಟನೆಗಳನ್ನು ರಷ್ಯಾ ಭಯೋತ್ಪಾದಕ ಸಂಘಟನೆಗಳೆಂದು ಈ ಹಿಂದೆ ಘೋಷಿಸಿತ್ತು.