ADVERTISEMENT

ಪುಟಿನ್ ವಿರುದ್ಧ ದಂಗೆ ಎದ್ದಿದ್ದ ವ್ಯಾಗ್ನರ್‌ ಗುಂಪಿನ ನಾಯಕ ಆಫ್ರಿಕಾದಲ್ಲಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2023, 5:45 IST
Last Updated 22 ಆಗಸ್ಟ್ 2023, 5:45 IST
ಯೆವ್ಗೆನಿ ಪ್ರಗೋಷಿನ್
ಯೆವ್ಗೆನಿ ಪ್ರಗೋಷಿನ್    

ಮಾಸ್ಕೊ: ರಷ್ಯಾ ಸೇನಾ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದ ಖಾಸಗಿ ಸೇನಾ ಪಡೆ 'ವ್ಯಾಗ್ನರ್‌' ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್‌ ಅವರು ವಿಡಿಯೊ ಸಂದೇಶದಲ್ಲಿ ಕಾಣಿಸಿಕೊಂಡಿದ್ದಾರೆ. 

ಯೆವ್ಗೆನಿ ಪ್ರಿಗೋಷಿನ್‌ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅವರ ವಿಡಿಯೊ ಸಂದೇಶ ಸಾಮಾಜಿಕ ಜಾಲತಾಣ ಟೆಲಿಗ್ರಾಂನಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೊ ಅಧಿಕೃತ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

'ವ್ಯಾಗ್ನರ್‌' ಗುಂಪು ವಿದೇಶಗಳಲ್ಲಿ ಇಸ್ಲಾಮಿಕ್‌ ಉಗ್ರರು ಹಾಗೂ ಇತರೆ ಅಪರಾಧಿಗಳ ವಿರುದ್ಧ ಹೋರಾಡುತ್ತಿದೆ ಎಂದು ಯೆವ್ಗೆನಿ ಪ್ರಿಗೋಷಿನ್‌ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಜೂನ್‌ನಲ್ಲಿ ರಷ್ಯಾ ಪಡೆಗಳು ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ವಿರುದ್ಧವೇ 'ವ್ಯಾಗ್ನರ್‌' ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್‌ ಬಂಡಾಯವೆದ್ದಿದ್ದರು. ನಂತರ ಮಾತುಕತೆಗಳ ಮೂಲಕ ಈ ಬಂಡಾಯ ತಣ್ಣಗಾಗಿದೆ. 

ಪುಟಿನ್‌ ಅವರ ಆಪ್ತರಾಗಿದ್ದ ಯೆವ್ಗೆನಿ ಪ್ರಿಗೋಷಿನ್, ಪುಟಿನ್‌ ಬೆಂಬಲದಿಂದಲೇ 2014ರಲ್ಲಿ ‘ವ್ಯಾಗ್ನರ್’ ಎಂಬ ಖಾಸಗಿ ಮಿಲಿಟರಿ ಪಡೆ ಕಟ್ಟಿದ್ದರು. ಉಕ್ರೇನ್‌ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ‘ವ್ಯಾಗ್ನರ್’ ಗುಂಪು ಮಹತ್ವದ ಪಾತ್ರವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.