ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ
ಕೀವ್: ಕಳೆದ ರಾತ್ರಿ ರಷ್ಯಾ 805 ಡ್ರೋನ್‌ಗಳು ಮತ್ತು ಡಿಕಾಯ್‌ಗಳ ಮೂಲಕ ಉಕ್ರೇನ್ ಮೇಲೆ ಬೃಹತ್ ದಾಳಿ ಮಾಡಿದೆ. ಇದು ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದ ನಂತರ ನಡೆದ ಅತಿದೊಡ್ಡ ದಾಳಿಯಾಗಿದೆ.
ಉಕ್ರೇನ್‌ನ ವಾಯುಪಡೆಯ ವಕ್ತಾರ ಯೂರಿ ಇಹ್ನಾತ್, ಭಾನುವಾರದ ದಾಳಿಯು ರಷ್ಯಾದ ಅತಿದೊಡ್ಡ ಡ್ರೋನ್ ದಾಳಿ ಎಂದು ಅಸೋಸಿಯೇಟೆಡ್ ಪ್ರೆಸ್‌ಗೆ ದೃಢಪಡಿಸಿದರು.
ರಷ್ಯಾ ವಿವಿಧ ರೀತಿಯ 13 ಕ್ಷಿಪಣಿಗಳನ್ನು ಸಹ ಉಡಾಯಿಸಿದೆ.
ವಾಯುಪಡೆಯ ಹೇಳಿಕೆಯ ಪ್ರಕಾರ, ಉಕ್ರೇನ್ 747 ಡ್ರೋನ್‌ಗಳು ಮತ್ತು ನಾಲ್ಕು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.
ಉಕ್ರೇನ್‌ನಾದ್ಯಂತ 37 ಸ್ಥಳಗಳಲ್ಲಿ ಒಂಬತ್ತು ಕ್ಷಿಪಣಿಗಳು ಮತ್ತು 56 ಡ್ರೋನ್‌ಗಳು ಅಪ್ಪಳಿಸಿವೆ. ಹೊಡೆದುರುಳಿಸಿದ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಅವಶೇಷಗಳು 8 ಸ್ಥಳಗಳ ಮೇಲೆ ಬಿದ್ದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.