ADVERTISEMENT

ಉಕ್ರೇನ್‌ ಸರ್ಕಾರ ಬೀಳಿಸುವ ಪ್ರಶ್ನೆಯೇ ಇಲ್ಲ: 3ಸುತ್ತಿನ ಮಾತುಕತೆಯಲ್ಲಿ ಪ್ರಗತಿ

ಪಿಟಿಐ
Published 9 ಮಾರ್ಚ್ 2022, 20:48 IST
Last Updated 9 ಮಾರ್ಚ್ 2022, 20:48 IST
   

ಮಾಸ್ಕೊ/ಕೀವ್‌ (ಎಎಫ್‌ಪಿ/ಪಿಟಿಐ): ‘ಉಕ್ರೇನ್‌ ಸರ್ಕಾರವನ್ನು ಉರುಳಿಸಲು ರಷ್ಯಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿಲ್ಲ. ಅಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಉಕ್ರೇನ್‌ನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸ ಲಾಗುತ್ತಿದೆ’ ಎಂದು ರಷ್ಯಾ ಬುಧವಾರ ಹೇಳಿದೆ.

ಯುದ್ಧದಿಂದ ಜರ್ಜರಿತವಾಗಿರುವ ಉಕ್ರೇನ್‌ ರಾಜಧಾನಿ ಕೀವ್‌ ನಗರ ಸೇರಿ ಆರು ಪ್ರದೇಶಗಳಿಂದ ನಾಗರಿಕರನ್ನು ಸ್ಥಳಾಂತರಿಸಲು 12 ಗಂಟೆಗಳ ಕದನ ವಿರಾಮವನ್ನು ರಷ್ಯಾ ಮತ್ತು ಉಕ್ರೇನ್‌ ಘೋಷಿಸಿದ್ದವು. ಇದರಿಂದ ನಾಗರಿಕರ ಸ್ಥಳಾಂತರ ಪ್ರಕ್ರಿಯೆಗೆ ಒಂದಿಷ್ಟು ಚುರುಕು ಸಿಕ್ಕಿದೆ.

ರಷ್ಯಾದ ವಿದೇಶಾಂಗ ಸಚಿವಾ ಲಯದ ವಕ್ತಾರರಾದ ಮಾರಿಯಾ ಜಖರೋವಾ, ಎರಡು ದೇಶಗಳ ನಿಯೋಗದ ನಡುವೆ ನಡೆದಿರುವ ಮೂರು ಸುತ್ತಿನ ಮಾತುಕತೆಯನ್ನು ಉಲ್ಲೇಖಿಸಿ, ‘ಈ ನಿಟ್ಟಿನಲ್ಲಿ ಒಂದಿಷ್ಟು ಪ್ರಗತಿ ಸಾಧಿಸಿದ್ದೇವೆ. ಪ್ರಸ್ತುತ ಉಕ್ರೇನ್‌ನಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರವನ್ನು ಕಿತ್ತೊಗೆಯುವ ಉದ್ದೇಶದಿಂದ ನಾವು ಸೇನಾಪಡೆ
ಗಳನ್ನು ನಿಯೋಜಿಸಿಲ್ಲ’ ಎಂದುಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಮಂಗಳವಾರ ವಿಡಿಯೊ ಸಂವಾ ದದ ಮೂಲಕ ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಐತಿಹಾಸಿಕ ಭಾಷಣ ಮಾಡಿದ್ದ ಝೆಲೆನ್‌ಸ್ಕಿ,ತಮ್ಮ ದೇಶದ ಮೇಲೆ ಆಕ್ರಮಣ ಮಾಡಿರುವ ರಷ್ಯಾ ವನ್ನು ‘ಭಯೋತ್ಪಾದಕ ದೇಶ’ವಾಗಿ ಪರಿಗಣಿಸಬೇಕು ಎಂದು ಬ್ರಿಟನ್‌ ಸಂಸದರನ್ನು ಒತ್ತಾಯಿಸಿದ್ದರು.

ಪಾಕ್‌ ಪ್ರಜೆಯನ್ನೂ ರಕ್ಷಿಸಿದ ಭಾರತ

ನವದೆಹಲಿ (ಪಿಟಿಐ): ಉಕ್ರೇನ್‌ನ ಸುಮಿ ನಗರದಿಂದ ಭಾರತದ 700 ವಿದ್ಯಾರ್ಥಿಗಳ ಜೊತೆಗೆ ಪಾಕಿಸ್ತಾನದ ಪ್ರಜೆ ಸೇರಿ 17 ವಿದೇಶಿ ನಾಗರಿಕರನ್ನೂ ಯುದ್ಧಪೀಡಿತ ಉಕ್ರೇನ್‌ ನೆಲದಿಂದತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭಾರತೀಯ ವಿದ್ಯಾರ್ಥಿಗಳ ನಂತರ, ಇತರ ದೇಶಗಳ ವಿದ್ಯಾರ್ಥಿಗಳನ್ನು ಸಹ ತೆರವುಗೊಳಿಸಲಾಗಿದೆ. ಪಾಕಿಸ್ತಾನದ ಮಹಿಳೆ ಆಸ್ಮಾ ಶಫೀಕ್‌, ನೇಪಾಳದ ಪ್ರಜೆ, ಟ್ಯುನೀಷಿಯಾದ ಇಬ್ಬರು ಮತ್ತು ಬಾಂಗ್ಲಾದೇಶದ 13 ಪ್ರಜೆಗಳನ್ನು ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಸುಮಿಯಿಂದ ತೆರವುಗೊಳಿಸಲಾಗಿದೆ’ ಎಂದು ವಿದ್ಯಾರ್ಥಿ ಸಂಯೋಜಕ ಅನ್ಸದ್‌ ಅಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.