ADVERTISEMENT

ರಷ್ಯಾದಿಂದ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆ ನಿಯೋಜನೆ

ಏಜೆನ್ಸೀಸ್
Published 30 ಡಿಸೆಂಬರ್ 2025, 14:29 IST
Last Updated 30 ಡಿಸೆಂಬರ್ 2025, 14:29 IST
<div class="paragraphs"><p>ನೆರೆ ರಾಷ್ಟ್ರ ಬೆಲರೂಸ್‌ನಲ್ಲಿ ರಷ್ಯಾ ಸೇನೆ ಅಣ್ವಸ್ತ್ರ ಹೊರುವ ಸಾಮರ್ಥ್ಯದ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜನೆ ಮಾಡಿದೆ&nbsp; </p></div>

ನೆರೆ ರಾಷ್ಟ್ರ ಬೆಲರೂಸ್‌ನಲ್ಲಿ ರಷ್ಯಾ ಸೇನೆ ಅಣ್ವಸ್ತ್ರ ಹೊರುವ ಸಾಮರ್ಥ್ಯದ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜನೆ ಮಾಡಿದೆ 

   

ಎಎಫ್‌ಪಿ ಚಿತ್ರ 

ಮಾಸ್ಕೊ: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಸಾಗಿ, ಗುರಿ ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆ ದೇಶದ ಸೇನೆಯ ಬತ್ತಳಿಕೆ ಸೇರಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.

ADVERTISEMENT

ಉಕ್ರೇನ್‌ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಿ, ಶಾಂತಿ ಸ್ಥಾಪನೆ ಕುರಿತು ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ, ಈ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿರುವುದಾಗಿ ರಷ್ಯಾ ಹೇಳಿದೆ.

ನೆರೆ ರಾಷ್ಟ್ರ ಬೆಲರೂಸ್‌ನಲ್ಲಿ ಈ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜನೆ ಮಾಡಲಾಗಿದೆ. ಇದರ ಅಂಗವಾಗಿ ಸೇನೆ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು ಎಂದು ಸಚಿವಾಲಯ ತಿಳಿಸಿದೆ. ಆದರೆ, ಇಂತಹ ಎಷ್ಟು ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜನೆ ಮಾಡಲಾಗಿದೆ ಎಂಬ ಬಗ್ಗೆ ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.