ಮಾಸ್ಕೊ: ಇಲ್ಲಿ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡುವಾಗಿ ಬೆಂಕಿಗೆ ಆಹುತಿಯಾದ ಪ್ರಯಾಣಿಕರ ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ತನಿಖಾ ತಂಡಸೋಮವಾರ ಹೇಳಿದೆ.ವಿಮಾನ ಸಿಬ್ಬಂದಿ ಸೇರಿ ಒಟ್ಟು 78 ಮಂದಿ ಪ್ರಯಾಣಿಕರು ಇದರಲ್ಲಿದ್ದರು.
‘ಅವಘಡದಲ್ಲಿ 37 ಮಂದಿ ಪಾರಾಗಿದ್ದು, ಉಳಿದ 11 ಮಂದಿ ಗಾಯಗೊಂಡಿದ್ದಾರೆ’ ಎಂದು ಆರೋಗ್ಯ ಸಚಿವ ಡಿಮಿಟ್ರಿ ಹೇಳಿದ್ದಾರೆ.
‘ಪ್ರತಿಕೂಲ ಹವಾಮಾನದಿಂದಾಗಿ ಸಂಪರ್ಕ ಕಡಿತಕೊಂಡಿತು. ಸಂಪರ್ಕ ಬೆಳೆಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ’ ಎಂದು ಪೈಲೆಟ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.