ADVERTISEMENT

ಉಕ್ರೇನ್‌ನ ಡಾನ್‌ಬಾಸ್‌ ಪ್ರಾಂತ್ಯದ ವಶಕ್ಕೆ ರಷ್ಯಾ ಚಿತ್ತ

ದಾವೋಸ್‌ ವಿಶ್ವ ವ್ಯಾಪಾರ ಶೃಂಗಸಭೆಯಲ್ಲಿ ರಷ್ಯಾ ಕ್ರಮಕ್ಕೆ ಖಂಡನೆ ನಿರೀಕ್ಷೆ

ಏಜೆನ್ಸೀಸ್
Published 22 ಮೇ 2022, 13:35 IST
Last Updated 22 ಮೇ 2022, 13:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್(ಎಎಫ್‌ಪಿ): ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ವ್ಯಾಪಾರ ಮತ್ತು ರಾಜಕೀಯ ಗಣ್ಯರ ಸಭೆಯನ್ನು ರಷ್ಯಾದ ವಿರುದ್ಧ ವೇದಿಕೆಯಾಗಿಸಿಕೊಳ್ಳಲು ಉಕ್ರೇನ್ ಮುಂದಾಗಿರುವ ಬೆನ್ನಲ್ಲೇ, ರಷ್ಯಾ ಪಡೆಗಳು ಭಾನುವಾರ ಉಕ್ರೇನ್‌ನ ಮುಂಚೂಣಿಯಲ್ಲಿರುವ ನಗರಗಳ ಮೇಲೆ ತನ್ನ ಬಾಂಬ್ ದಾಳಿಯನ್ನು ಮುಂದುವರಿಸಿದೆ.

ದಾವೋಸ್ ಆರ್ಥಿಕ ಶೃಂಗಸಭೆಯನ್ನು ಉದ್ದೇಶಿಸಿ ಸೋಮವಾರ ಸಂಜೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಭಾಷಣ ಮಾಡಲಿದ್ದಾರೆ.

ಹಾರ್ಕೀವ್‌ನ ಉತ್ತರ, ಮೈಕೋಲೇವ್ ಮತ್ತು ಝಪೊರಿಝ್ವು ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಕ್ಷಿಪಣಿ ಮತ್ತು ಶೆಲ್‌ ದಾಳಿ ನಡೆಸುತ್ತಿರುವ ರಷ್ಯಾ, ಡಾನ್‌ಬಾಸ್‌ನಲ್ಲಿ ಎಂಟು ಮಂದಿ ನಾಗರಿಕರನ್ನು ಹತ್ಯೆ ಮಾಡಿದೆ. ಈ ಮೂಲಕಡಾನ್‌ಬಾಸ್‌ ಪ್ರಾಂತ್ಯವನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ರಷ್ಯಾ ಚಿತ್ತ ಹರಿಸಿದೆ.

ADVERTISEMENT

ಈ ನಡುವೆ, ರಷ್ಯಾ ಸೇನೆಯನ್ನು ಎದುರಿಸಲು ಪಾಶ್ಚಿಮಾತ್ಯ ಮತ್ತು ಅಂತರರಾಷ್ಟ್ರೀಯ ನೆರವು ಪಡೆಯಲು ಯತ್ನ ನಡೆಸುತ್ತಿದೆ. ಅಲ್ಲದೆ, ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹೇರಿರುವ ಯುರೋಪ್ ದೇಶಗಳು, ಉಕ್ರೇನ್‌ಗೆ ಬೆಂಬಲ ನೀಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.