ADVERTISEMENT

ಲಿಸಿಚಾನ್‌ಸ್ಕ್‌ ವಶಪಡಿಸಿಕೊಂಡ ರಷ್ಯಾ

ರಾಯಿಟರ್ಸ್
Published 3 ಜುಲೈ 2022, 15:51 IST
Last Updated 3 ಜುಲೈ 2022, 15:51 IST

ಕೀವ್‌/ ಮಾಸ್ಕೊ:ಪೂರ್ವ ಉಕ್ರೇನಿನ ಪ್ರಮುಖ ಮತ್ತು ಆಯಕಟ್ಟಿನ ನಗರ ಲಿಸಿಚಾನ್‌ಸ್ಕ್‌ ಅನ್ನು ರಷ್ಯಾ ಪಡೆಗಳು ಸುತ್ತುವರಿದಿದ್ದು, ಇಡೀ ಲುಹಾನ್‌ಸ್ಕ್‌ ಪ್ರದೇಶ ನಿಯಂತ್ರಣಕ್ಕೆ ಪಡೆಯಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಭಾನುವಾರ ಹೇಳಿದೆ.

ಲಿಸಿಚಾನ್‌ಸ್ಕ್‌ ಸುತ್ತಲಿನ ಹಳ್ಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದೊಳಗೆ ಉಕ್ರೇನ್‌ ಪಡೆಗಳ ವಿರುದ್ಧ ತೀವ್ರ ಕಾದಾಟ ನಡೆದಿದೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗೀ ಶೋಯಿಗು ತಿಳಿಸಿರುವುದಾಗಿ ‘ರಿಯಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲಿಸಿಚಾನ್‌ಸ್ಕ್‌ ಜತೆಗೆ ಬೆಲೊಗೊರೊವ್ಕಾ, ನೊವೊರುಜೆಸ್ಕ್‌, ಮಲೊರಿಯಜಂಟ್ಸೆವೆ ಹಾಗೂ ಬಿಲಾಹೊರಾ ಪಟ್ಟಣಗಳನ್ನೂ ವಶಪಡಿಸಿಕೊಂಡಿರುವುದಾಗಿ ಶೋಯುಗು, ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ತಿಳಿಸಿದ್ದಾರೆ.

ADVERTISEMENT

ಉಕ್ರೇನ್‌ ಅಧ್ಯಕ್ಷರ ಸಲಹೆಗಾರ, ಉಕ್ರೇನ್‌ ಪಡೆಗಳಿಗೆಲಿಸಿಚಾನ್‌ಸ್ಕ್‌ನಲ್ಲಿ ಹಿನ್ನಡೆಯಾಗಿರುವುದನ್ನು ಒಪ್ಪಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಈ ನಗರ ಪತನವಾಗಬಹುದು ಎಂದಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ.

ಉಕ್ರೇನ್‌ ಪಡೆಗಳ ದಾಳಿಗೆ ರಷ್ಯಾದ ಬೆಲ್ಗೊರೊಡ್‌ ನಗರದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. 11 ಅಪಾರ್ಟ್‌ಮೆಂಟ್‌ಗಳು ಮತ್ತು 39 ಮನೆಗಳಿಗೆ ಹಾನಿಯಾಗಿದೆ. ಐದು ಕಟ್ಟಡಗಳು ಧ್ವಂಸಗೊಂಡಿವೆ ಎಂದು ರಷ್ಯಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.