ADVERTISEMENT

ಭಾರತಕ್ಕೆ ’ಎಸ್‌–400‘ ಕ್ಷಿಪಣಿ ವ್ಯವಸ್ಥೆ ಪೂರೈಕೆ ಆರಂಭಿಸಿದ ರಷ್ಯಾ

ರಾಯಿಟರ್ಸ್
Published 14 ನವೆಂಬರ್ 2021, 11:39 IST
Last Updated 14 ನವೆಂಬರ್ 2021, 11:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಸ್ಕೊ: ಭಾರತಕ್ಕೆ ‘ಎಸ್‌–400’ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಪೂರೈಸುವ ಪ್ರಕ್ರಿಯೆಗೆ ರಷ್ಯಾ ಚಾಲನೆ ನೀಡಿದೆ.

ರಕ್ಷಣಾ ವ್ಯವಸ್ಥೆಗಳನ್ನು ಸರಬರಾಜು ಮಾಡುವ ರಷ್ಯಾದ ಮಿಲಿಟರಿ ಸಹಕಾರ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ಶುಗಯೇವ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಷ್ಯಾ ಸುದ್ದಿಸಂಸ್ಥೆಗಳು ಈ ಕುರಿತು ಭಾನುವಾರ ವರದಿ ಮಾಡಿವೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರುವ ಅಪಾಯವೂ ಇದೆ. ಇಂಥ ಬೆದರಿಕೆ ನಡುವೆಯೂ ರಷ್ಯಾ ನಿರ್ಮಿತ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಭಾರತ ಮುಂದಾಗಿದೆ. 2017ರಲ್ಲಿ ಅಮೆರಿಕ ಕಾನೂನು ಜಾರಿಗೆ ತಂದಿದೆ. ಇತರ ರಾಷ್ಟ್ರಗಳು ರಷ್ಯಾದಿಂದ ಮಿಲಿಟರಿ ಹಾರ್ಡ್‌ವೇರ್ ಖರೀದಿ ಮಾಡುವುದರ ಮೇಲೆ ಈ ಕಾನೂನು ನಿಷೇಧ ಹೇರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.