ADVERTISEMENT

ಲುವಿವ್‌ನ ಶಸ್ತ್ರಕೋಠಿ ದೂರಗಾಮಿ ಕ್ಷಿಪಣಿಗಳಿಂದ ಧ್ವಂಸ: ರಷ್ಯಾ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 14:23 IST
Last Updated 15 ಜೂನ್ 2022, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್: ಉಕ್ರೇನ್‌ಗೆ ನ್ಯಾಟೋ ‍‍ಪೂರೈಸಿರುವ ಲುವಿವ್‌ ಪ್ರದೇಶದ ಯುದ್ದೋಪಕರಣಗಳ ಬೃಹತ್‌ ಶಸ್ತ್ರಕೋಠಿಯನ್ನು ನಾಶ ಮಾಡಲು ದೂರಗಾಮಿ ಕ್ಷಿಪಣಿ ಬಳಸಲಾಗಿದೆ ಎಂದು ರಷ್ಯಾದ ಮಿಲಿಟರಿ ಬುಧವಾರ ಹೇಳಿದೆ.

ಉಕ್ರೇನ್‌ನ ಪೂರ್ವ ಭಾಗದ ಸೀವಿರೋಡೋನೆಟ್ಸ್ಕ್‌ ಭಾಗದಲ್ಲಿ ಕೆಲವು ದಿನಗಳಿಂದೀಚೆ ತೀವ್ರವಾಗಿ ದಾಳಿ ನಡೆಸಿರುವಂತೆಯೇ ಪಶ್ಚಿಮ ಭಾಗದಲ್ಲೂ ಉಕ್ರೇನ್‌ನ ಬಲ ಕುಗ್ಗಿಸುವ ತಂತ್ರದ ಭಾಗವಾಗಿ ಈ ಕ್ಷಿಪಣಿ ದಾಳಿ ನಡೆಸಿದೆ.

ಈ ಮಧ್ಯೆ,ಅಜೋಟ್ ರಾಸಾಯನಿಕ ಘಟಕದಿಂದ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಉಕ್ರೇನ್‌ ಪಡೆಗಳು ಹಾಳು ಮಾಡಿವೆ ಎಂದುರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ 500 ನಾಗರಿಕರು ಮತ್ತು ಉಕ್ರೇನ್‌ ಹೋರಾಟಗಾರರು ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

ADVERTISEMENT

ಅಜೋಟ್ ಘಟಕದಿಂದ ಮಾನವೀಯ ಕಾರಿಡಾರ್ ಅನ್ನು ರಷ್ಯಾ ಘೋಷಿಸಿತ್ತು. ಈಮಾನವೀಯ ಕಾರಿಡಾರ್ ಕುರಿತು ರಷ್ಯಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಉಕ್ರೇನ್‌ನ ಪ್ರಾದೇಶಿಕ ಸೇನಾ ಗವರ್ನರ್ ಸೆರ್‌ಹಿಯ್‌ ಹೈಡೇ ನಿರಾಕರಿಸಿದ್ದಾರೆ.

ಉಕ್ರೇನ್ ಬಿಕ್ಕಟ್ಟು ಪರಿಹರಿಸಲು ಸಿದ್ಧ: (ಬೀಜಿಂಗ್‌ ವರದಿ)– ಉಕ್ರೇನ್ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ‘ರಚನಾತ್ಮಕ ಪಾತ್ರ’ ವಹಿಸಲು ಸಿದ್ದರಿದ್ದಾರೆ ಎಂದು ಸರ್ಕಾರಿ ಒಡೆತನದ ಸುದ್ದಿವಾಹಿನಿ ವರದಿ ಮಾಡಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಷಿ, ‘ಉಕ್ರೇನ್‌ ಬಿಕ್ಕಟ್ಟು ಪರಿಹರಿಸಲು ಸಂಬಂಧಿಸಿದ ಎಲ್ಲಾ ಪಕ್ಷಗಳು ಜವಾಬ್ದಾರಿಯುತ ನಿಲುವು ತೆಗೆದುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.