ADVERTISEMENT

ಉಕ್ರೇನ್‌: ರಷ್ಯಾಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ಅಮೆರಿಕ

ಪಿಟಿಐ
Published 15 ಫೆಬ್ರುವರಿ 2022, 19:45 IST
Last Updated 15 ಫೆಬ್ರುವರಿ 2022, 19:45 IST
ಉಕ್ರೇನ್‌ ಗಡಿಯಲ್ಲಿ ನಡೆಯುತ್ತಿರುವ ತಾಲೀಮಿನಲ್ಲಿ ಪಾಲ್ಗೊಂಡಿದ್ದ ಯುದ್ಧ ಟ್ಯಾಂಕ್‌ಗಳು ತಮ್ಮ ನೆಲೆಗಳಿಗೆ ವಾಪಸಾಗುತ್ತಿದ್ದ ಚಿತ್ರವನ್ನು ರಷ್ಯಾ ರಕ್ಷಣಾ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ
ಉಕ್ರೇನ್‌ ಗಡಿಯಲ್ಲಿ ನಡೆಯುತ್ತಿರುವ ತಾಲೀಮಿನಲ್ಲಿ ಪಾಲ್ಗೊಂಡಿದ್ದ ಯುದ್ಧ ಟ್ಯಾಂಕ್‌ಗಳು ತಮ್ಮ ನೆಲೆಗಳಿಗೆ ವಾಪಸಾಗುತ್ತಿದ್ದ ಚಿತ್ರವನ್ನು ರಷ್ಯಾ ರಕ್ಷಣಾ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ‘ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅಮೆರಿಕವು ರಷ್ಯಾಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಉಕ್ರೇನ್‌ನೊಂದಿಗಿನ ಬಿಕ್ಕಟ್ಟನ್ನು ಪರಿಹರಿಸಲು ರಚನಾತ್ಮಕವಾಗಿ ತೊಡಗಲು ರಷ್ಯಾ ಇಚ್ಛಿಸಿದಲ್ಲಿ, ಈಗಲೂ ರಾಜತಾಂತ್ರಿಕ ಮಾರ್ಗ ಮುಕ್ತವಾಗಿದೆ ಎಂದು ಶ್ವೇತಭವನದ ಉಪಪ್ರಧಾನ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

‘ಅಧ್ಯಕ್ಷ ಜೋ ಬೈಡನ್‌ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಕಳೆದ ವಾರಾಂತ್ಯ ಮಾತನಾಡಿದ್ದಾರೆ. ಈ ವಿಷಯವಾಗಿ ನಮ್ಮ ಮಿತ್ರರಾಷ್ಟ್ರಗಳೊಂದಿಗೂ ಸಮನ್ವಯ ಸಾಧಿಸಲಾಗುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.