ADVERTISEMENT

ಉಕ್ರೇನ್‌ ಆಕ್ರಮಣ: ಮಾರಿಯುಪೋಲ್‌ನ ಮಸೀದಿ ಮೇಲೆ ರಷ್ಯಾದ ಪಡೆಗಳಿಂದ ಶೆಲ್ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2022, 11:08 IST
Last Updated 12 ಮಾರ್ಚ್ 2022, 11:08 IST
ದಾಳಿಯ ನಂತರ ಮಾರಿಯುಪೋಲ್‌ ಚಿತ್ರಣ (ಎಪಿ)
ದಾಳಿಯ ನಂತರ ಮಾರಿಯುಪೋಲ್‌ ಚಿತ್ರಣ (ಎಪಿ)   

ಮಾರಿಯುಪೋಲ್‌: ದಕ್ಷಿಣ ಉಕ್ರೇನ್‌ನ ಬಂದರು ನಗರವಾದ ಮಾರಿಯುಪೋಲ್‌ನ ಮಸೀದಿಯೊಂದರ ಮೇಲೆ ರಷ್ಯಾದ ಪಡೆಗಳು ಶನಿವಾರ ಶೆಲ್ ದಾಳಿ ನಡೆಸಿವೆ.

ಈ ಕುರಿತು ಉಕ್ರೇನ್‌ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ ಎಂದು ಸುದ್ದಿಸಂಸ್ಥೆ ‘ರಾಯಿಟರ್ಸ್‌’ ವರದಿ ಮಾಡಿದೆ.

ರಷ್ಯಾ ಪಡೆಗಳಿಂದ ಶೆಲ್‌ ದಾಳಿಗೆ ಒಳಗಾದ ಮಸೀದಿಯಲ್ಲಿ 80 ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು. ಅದರಲ್ಲಿ ಮಕ್ಕಳು, ವಯಸ್ಕರು ಹಾಗೂ ಟರ್ಕಿಶ್‌ ನಾಗರಿಕರು ಸೇರಿದ್ದಾರೆ. ಸಾವುನೋವುಗಳ ಕುರಿತು ಮಾಹಿತಿ ಹೊರಬರಬೇಕಿದೆ ಎಂದು ಉಕ್ರೇನ್‌ ಸರ್ಕಾರ ತಿಳಿಸಿದೆ.

ADVERTISEMENT

ಇದೇ ವೇಳೆ, ಮಾರಿಯುಪೋಲ್‌ನಿಂದ ಜನರನ್ನು ಹೊರಗೆ ಬಿಡಲು ರಷ್ಯಾ ನಿರಾಕರಿಸಿದೆ ಎಂದು ಉಕ್ರೇನ್ ಆರೋಪಿಸಿದೆ.

ಅಜೋವ್ ಸಮುದ್ರ ತೀರದ, 4,50,000 ಜನಸಂಖ್ಯೆ ಇರುವ ಮಾರಿಯುಪೋಲ್‌ ಮೇಲೆ ಶೆಲ್‌ ದಾಳಿ ನಡೆಯುತ್ತಿದೆ. ತೀವ್ರ ಚಳಿಗಾಲದ ನಡುವೆಯೇ ನಗರಕ್ಕೆ ನೀರು, ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.