ADVERTISEMENT

ಕೀವ್‌ ಸೇರಿದಂತೆ ಉಕ್ರೇನ್‌ನ ಹಲವು ನಗರಗಳಲ್ಲಿನ ಸೇನಾ ನೆಲೆ ನಾಶ: ರಷ್ಯಾ

ಏಜೆನ್ಸೀಸ್
Published 17 ಜೂನ್ 2025, 10:23 IST
Last Updated 17 ಜೂನ್ 2025, 10:23 IST
   

ಮಾಸ್ಕೋ: ಉಕ್ರೇನ್‌ನ ಕೀವ್‌ ಹಾಗೂ ಜಪೋರಿಝಿಯಾ ಪ್ರಾಂತ್ಯದಲ್ಲಿನ ಸೇನಾ ನೆಲೆಗಳ ಮೇಲೆ ಸೋಮವಾರ ತಡರಾತ್ರಿ ಭಾರಿ ಪ್ರಮಾಣದ ದಾಳಿ ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಮಂಗಳವಾರ ತಿಳಿಸಿದೆ.

ರಷ್ಯಾ ಸೇನೆಯು ಹೆಚ್ಚಿನ ನಿಖರತೆ ಹೊಂದಿರುವ ವಾಯು, ಭೂ ಹಾಗೂ ನೌಕಾ ಪಡೆಯ ಆಯುಧಗಳನ್ನು ಬಳಸಿಕೊಂಡು ಸೇನಾ ಶಿಬಿರಗಳನ್ನು ಗುರಿಮಾಡಿಕೊಂಡು ಏಕಕಾಲದಲ್ಲಿ ದಾಳಿಮಾಡಿದೆ. ಇದರಲ್ಲಿ ಡ್ರೋನ್‌ಗಳನ್ನು ಕೂಡ ಬಳಸಿಕೊಳ್ಳಲಾಗಿದ್ದು, ದಾಳಿಯಲ್ಲಿ ನಿಗದಿತ ಗುರಿಗಳನ್ನು ನಾಶಮಾಡಲಾಗಿದೆ ಎಂದು ಹೇಳಿದೆ.

ಸೋಮವಾರ ತಡರಾತ್ರಿ ನಡೆದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ಕನಿಷ್ಠ 15 ಜನರು ಮೃತಪಟ್ಟಿರುವುದಾಗಿ ಉಕ್ರೇನ್‌ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.