ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಕೀವ್: ರಷ್ಯಾದೊಂದಿಗಿನ ಯುದ್ಧದಲ್ಲಿ ಮೃತಪಟ್ಟ 1,212 ಯೋಧರ ಶವಗಳನ್ನು ದೇಶಕ್ಕೆ ತರಲಾಗಿದೆ ಎಂದು ಯುದ್ಧ ಕೈದಿಗಳ ವಿನಿಮಯದ ಹೊಣೆ ಹೊತ್ತಿರುವ ಉಕ್ರೇನ್ ಸಂಸ್ಥೆ ಬುಧವಾರ ತಿಳಿಸಿದೆ.
'ಸೇನಾ ವಾಪಸಾತಿ ಚಟುವಟಿಕೆಗಳ ಪರಿಣಾಮವಾಗಿ 1,212 ಮೃತ ಯೋಧರ ಶವಗಳನ್ನು ಉಕ್ರೇನ್‌ಗೆ ತರಲಾಗಿದೆ' ಎಂದು ಸಂಸ್ಥೆಯು ಟೆಲಿಗ್ರಾಮ್ ಮೂಲಕ ಮಾಹಿತಿ ನೀಡಿದೆ.
ಶವಗಳನ್ನು ಹೊಂದಿದ್ದ ಟ್ರಕ್‌ಗಳ ಹಿಂದೆ ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯ (ಐಸಿಆರ್‌ಸಿ) ಸಿಬ್ಬಂದಿ ಗೋಪ್ಯ ಸ್ಥಳದಲ್ಲಿ ನಡೆದು ಹೋಗುತ್ತಿರುವ ಚಿತ್ರಗಳನ್ನೂ ಹಂಚಿಕೊಂಡಿದೆ.
ಉಕ್ರೇನ್ ಹಾಗೂ ರಷ್ಯಾ ಕಳೆದವಾರ ನಡೆದ ಮಾತುಕತೆಯ ವೇಳೆ ಶವಗಳ ಹಸ್ತಾಂತರ ಕುರಿತು ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.