ADVERTISEMENT

20ನೇ ತಿಂಗಳಿಗೆ ಕಾಲಿಟ್ಟ ರಷ್ಯಾ–ಉಕ್ರೇನ್‌ ಯುದ್ಧ!

ಎಪಿ
Published 25 ಸೆಪ್ಟೆಂಬರ್ 2023, 14:27 IST
Last Updated 25 ಸೆಪ್ಟೆಂಬರ್ 2023, 14:27 IST
ಉಕ್ರೇನ್‌ ಸೈನಿಕರ ಯುದ್ಧ ತಾಲೀಮು (ಎಎಫ್‌ಪಿ ಚಿತ್ರ)
ಉಕ್ರೇನ್‌ ಸೈನಿಕರ ಯುದ್ಧ ತಾಲೀಮು (ಎಎಫ್‌ಪಿ ಚಿತ್ರ)   

ಕೀವ್‌: ಉಕ್ರೇನ್‌ ವಿರುದ್ಧ ರಷ್ಯಾದ ಯುದ್ಧ 20ನೇ ತಿಂಗಳಿಗೆ ಕಾಲಿಟ್ಟಿದ್ದು, ಕೆರೊಸೊನ್‌ ಪ್ರಾಂತ್ಯದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ರಷ್ಯಾದ ಸೇನೆ ಭಾನುವಾರ ಬೆರಿಸ್ಲೇವ್‌ ನಗರವನ್ನು ಸುತ್ತುವರಿದು ಹಲವು ಮನೆಗಳನ್ನು ಧ್ವಂಸಗೊಳಿಸಿತು. ಈ ವೇಳೆ ಒಬ್ಬ ಮಹಿಳೆ ಮೃತಪಟ್ಟರೆ, ಪೊಲೀಸ್‌ ಅಧಿಕಾರಿಯೂ ಸೇರಿ ಐವರು ತೀವ್ರ ಗಾಯಗೊಂಡರು ಎಂದು ಕೆರೊಸೊನ್‌ ಪ್ರಾಂತ್ಯದ ರಾಜ್ಯಪಾಲ ಒಲೆಗ್ಸಾಂಡರ್‌ ಪ್ರೊಕೊಡಿನ್‌ ಮಾಧ್ಯಮಗಳಿಗೆ ತಿಳಿಸಿದರು.  

ಮತ್ತೊಂದೆಡೆ, ಲ್ವೋವ್‌ ಗ್ರಾಮದ ಮೇಲೆ ನಡೆದ ರಷ್ಯಾದ ವಾಯುದಾಳಿಯಲ್ಲಿ 67 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ಪ್ರೊಕೊಡಿನ್‌ ಹೇಳಿದರು. 

ADVERTISEMENT

ಉಕ್ರೇನ್‌ ವಿರುದ್ಧ ರಷ್ಯಾ 2022ರ ಫೆಬ್ರುವರಿ 24ರಂದು ಮಿಲಿಟರಿ ಕಾರ್ಯಾಚರಣೆ ಘೋಷಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.