ಕೀವ್: ಉಕ್ರೇನ್‌ನ ಖೆರ್ಸಾನ್ ನಗರದ ಮೇಲೆ ರಷ್ಯಾ ಪಡೆಗಳು ಬುಧವಾರ ನಡೆಸಿದ ಗ್ಲೈಡ್ ಬಾಂಬ್‌ಗಳ ದಾಳಿಯಲ್ಲಿ ಒಬ್ಬ ಮಹಿಳೆ ಮೃತಪಟ್ಟು, ಇತರ ಐವರು ಗಾಯಗೊಂಡಿದ್ದಾರೆ.
‘ಈ ಮೊದಲಿನ ದಾಳಿಗಳಲ್ಲಿ ಗಾಯಗೊಂಡಿರುವ ವೈದ್ಯರು, ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರನ್ನು ರಕ್ಷಿಸುವ ಕಾರ್ಯಕ್ಕೆ ತಡೆ ಒಡ್ಡುವ ಉದ್ದೇಶದಿಂದಲೇ ರಷ್ಯಾ ಈ ದಾಳಿ ನಡೆಸುತ್ತಿದೆ’ ಎಂದು ಉಕ್ರೇನ್ ಅಧಿಕಾರಿಗಳು ಆರೋಪಿಸಿದ್ದಾರೆ.
ರಷ್ಯಾ ಪಡೆಗಳು ಉಕ್ರೇನ್‌ನ ಎಲ್ಲೆಡೆ ಪ್ರತಿದಿನ ದಾಳಿ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.