ADVERTISEMENT

ರಷ್ಯಾದ ಗನ್ ಪೌಡರ್ ಕಾರ್ಖಾನೆ ಸ್ಫೋಟದಲ್ಲಿ 16 ಸಾವು

ಪಿಟಿಐ
Published 22 ಅಕ್ಟೋಬರ್ 2021, 10:57 IST
Last Updated 22 ಅಕ್ಟೋಬರ್ 2021, 10:57 IST
ರಷ್ಯಾ ರಾಜಧಾನಿ ಮಾಸ್ಕೊದ ಆಗ್ನೇಯ ಭಾಗದಲ್ಲಿರುವ ಗನ್ ಪೌಡರ್ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿರುವ ಅಗ್ನಿಶಾಮಕ ಸಿಬ್ಬಂದಿ.
ರಷ್ಯಾ ರಾಜಧಾನಿ ಮಾಸ್ಕೊದ ಆಗ್ನೇಯ ಭಾಗದಲ್ಲಿರುವ ಗನ್ ಪೌಡರ್ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿರುವ ಅಗ್ನಿಶಾಮಕ ಸಿಬ್ಬಂದಿ.   

ಮಾಸ್ಕೊ: ರಷ್ಯಾದಲ್ಲಿ ಶುಕ್ರವಾರ ಗನ್‌ ಪೌಡರ್‌ (ಮದ್ದು ಗುಂಡುಗಳ ತಯಾರಿಸುವ ಪುಡಿ) ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಸ್ಕೊದ ಆಗ್ನೇಯ ಭಾಗದಲ್ಲಿ 270 ಕಿ.ಮೀ ದೂರದಲ್ಲಿರುವ ರಯಜಾನ್ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ತುರ್ತು ಪರಿಸ್ಥಿತಿ ಸಚಿವಾಲಯ ತಿಳಿಸಿದೆ.

ಸ್ಫೋಟದಲ್ಲಿ ಏಳು ಜನರು ಸಾವನ್ನಪ್ಪಿದರು. ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಆರಂಭದಲ್ಲಿ ಹೇಳಿದ್ದರು. ಆದರೆ ಕೆಲವು ಗಂಟೆಗಳ ನಂತರ ಕಾಣೆಯಾದವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಸ್ಥಳೀಯ ಅಧಿಕಾರಿಗಳ ಪ್ರಕಾರ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತುರ್ತು ಇಲಾಖೆಯ ಸುಮಾರು 170 ಸಿಬ್ಬಂದಿ, 50 ಅಗ್ನಿಶಾಮಕ ವಾಹನಗಳೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.