ADVERTISEMENT

ರಷ್ಯಾ ಶೆಲ್‌ ದಾಳಿ: 8 ಮಂದಿ ಉಕ್ರೇನಿಗರ ಸಾವು

ಏಜೆನ್ಸೀಸ್
Published 9 ಸೆಪ್ಟೆಂಬರ್ 2022, 19:30 IST
Last Updated 9 ಸೆಪ್ಟೆಂಬರ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೀವ್‌:ಉಕ್ರೇನಿನ ಪೂರ್ವಭಾಗದ ಬಾಖ್ಮಟ್‌ ನಗರದ ಮೇಲೆ ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಯಿಂದ ಎಂಟು ನಾಗರಿಕರು ಹತರಾಗಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್‌ ಪಾವ್ಲೊ ಕಿರಿಲೆಂಕೊ ಶುಕ್ರವಾರ ತಿಳಿಸಿದ್ದಾರೆ.

ಗ್ರೇಟರ್‌ ಡಾನ್‌ಬಾಸ್‌ ಪ್ರಾಂತ್ಯದ ಮೇಲೆ ರಷ್ಯಾ ನಡೆಸುತ್ತಿರುವ ನಿರಂತರ ದಾಳಿಯಿಂದ ಭಾರಿ ಹಾನಿಯಾಗಿದೆ.ವಸತಿ ಕಟ್ಟಡಗಳು, ಅಂಗಡಿಗಳು, ಸಾಂಸ್ಕೃತಿಕ ಕಟ್ಟಡಗಳು, ಆಡಳಿತ ಕಚೇರಿಗಳು, ಮಾರುಕಟ್ಟೆಗಳು ಧ್ವಂಸವಾಗಿವೆ. ವಿದ್ಯುತ್‌, ಕುಡಿಯುವ ನೀರಿನ ಸಂಪರ್ಕವನ್ನು ನಗರ ನಾಲ್ಕು ದಿನಗಳಿಂದ ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ರಷ್ಯಾ ಆಕ್ರಮಿಸಿಕೊಂಡಿರುವ ಡಾನ್‌ಬಾಸ್‌ ಪ್ರಾಂತ್ಯವನ್ನು ಪುನಃ ವಶಪಡಿಸಿಕೊಳ್ಳಲು ಉಕ್ರೇನ್‌ ಪಡೆಗಳು ತೀವ್ರ ಹೋರಾಟ ನಡೆಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.