ಕೀವ್: ‘ಉಕ್ರೇನ್‌ನ ಝಪೋರಿಝಿಯಾ ನಗರದ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಮೇಲೆ ರಷ್ಯಾ ಗುರುವಾರ ಕ್ಷಿಪಣಿ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್‌ಸ್ಕಿ ಪ್ರತಿಕ್ರಿಯಿಸಿದ್ದು, ‘ಸಮುಚ್ಚಯದ ಹಲವಾರು ಮಹಡಿಗಳು ನಾಶವಾಗಿವೆ. ಇನ್ನೂ ಕತ್ತಲಿರುವಾಗಲೇ ಈ ದಾಳಿ ನಡೆಸಲಾಗಿದೆ’ ಎಂದು ಹೇಳಿದ್ದಾರೆ.
‘ರಷ್ಯಾವು ನಮ್ಮ ಜನರಿಗೆ ಪ್ರತಿ ದಿನವನ್ನು ಭಯೋತ್ಪಾದನೆಯ ದಿನವನ್ನಾಗಿ ಮಾಡಲು ಬಯಸುತ್ತದೆ. ಆದರೆ ನಮ್ಮ ದೇಶದಲ್ಲಿ ದುಷ್ಟತನ ಆಳ್ವಿಕೆ ನಡೆಸುವುದಿಲ್ಲ’ ಎಂದೂ ತಿಳಿಸಿದ್ದಾರೆ.
‘ದಾಳಿಗೆ ಒಳಗಾದವರ ಪೈಕಿ ಸದ್ಯ 11 ಮಂದಿಯನ್ನು ರಕ್ಷಿಸಲಾಗಿದೆ’ ಎಂದು ಇಲ್ಲಿನ ರಾಜ್ಯ ತುರ್ತು ಸೇವಾ ಸಂಸ್ಥೆ ತನ್ನ ಆನ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.