ADVERTISEMENT

ರಷ್ಯಾ ಕೋವಿಡ್ ಸೋಂಕು ಉಲ್ಬಣ: ಒಂದೇ ದಿನ 1,106 ಸಾವು

ರಾಯಿಟರ್ಸ್
Published 26 ಅಕ್ಟೋಬರ್ 2021, 10:12 IST
Last Updated 26 ಅಕ್ಟೋಬರ್ 2021, 10:12 IST
ರಷ್ಯಾದ ವೊಲ್ಜ್‌ಹಸ್ಕಿ ನಗರದ ಆಸ್ಪತ್ರೆಯೊಂದರದಲ್ಲಿ ಸೋಮವಾರ ಕೋವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಯೊಬ್ಬರನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿರುವ ದೃಶ್ಯ.
ರಷ್ಯಾದ ವೊಲ್ಜ್‌ಹಸ್ಕಿ ನಗರದ ಆಸ್ಪತ್ರೆಯೊಂದರದಲ್ಲಿ ಸೋಮವಾರ ಕೋವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಯೊಬ್ಬರನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿರುವ ದೃಶ್ಯ.   

ಮಾಸ್ಕೊ: ರಷ್ಯಾದಾದ್ಯಂತ ಕಳೆದ 24 ಗಂಟೆಗಳಲ್ಲಿ ಕೋವಿಡ್‌ ಸೋಂಕಿನಿಂದ 1,106 ಮಂದಿ ಸಾವನ್ನಪ್ಪಿದ್ದು, ಇದು ಈ ಪಿಡುಗು ಆರಂಭವಾದಾಗಿನಿಂದ ಇದುವರೆಗೆ ದಾಖಲಾಗಿರುವ ಅತಿ ಹೆಚ್ಚಿನ ಸಾವಿನ ಪ್ರಕರಣವಾಗಿದೆ.

ಹೀಗಾಗಿ, ಮಾಸ್ಕೊ ಸೇರಿದಂತೆ ವಿವಿಧ ನಗರಗಳಲ್ಲಿ ಮತ್ತೆ ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಕಳೆದ ಆರು ದಿನಗಳಿಂದ ಪ್ರತಿ ನಿತ್ಯ ದಾಖಲೆ ಪ್ರಮಾಣದಲ್ಲಿ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಸರ್ಕಾರಿ ಕೋವಿಡ್‌ ಕಾರ್ಯಪಡೆಯು 36,446 ಹೊಸ ಸೋಂಕಿನ ಪ್ರಕರಣಗಳನ್ನು ವರದಿ ಮಾಡಿದೆ. ಹಿಂದಿನ ದಿನ 37,930 ಹೊಸ ಪ್ರಕರಣಗಳು ವರದಿಯಾಗಿದ್ದವು.

ADVERTISEMENT

ನವೆಂಬರ್ ಮೊದಲ ವಾರದಿಂದ ರಷ್ಯಾದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳ್ಳುವ ಸಾಧ್ಯತೆ ಇದ್ದು, ಮಾಸ್ಕೊದಲ್ಲಿ ಗುರುವಾರದಿಂದಲೇ ಭಾಗಶಃ ಲಾಕ್‌ಡೌನ್ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ಔಷಧಾಲಯಗಳು ಮತ್ತು ಸೂಪರ್‌ಮಾರ್ಕೆಟ್‌ಗಳಂತಹ ಅಗತ್ಯ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಲಾಗುತ್ತಿದೆ.

ಕೋವಿಡ್ ಲಸಿಕೆ ಪಡೆಯುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸೋಂಕಿನ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಎರಡು ಲಸಿಕೆ ಪಡೆದ ನೌಕರರಿಗೆ ಎರಡು ದಿನಗಳ ವೇತನ ಸಹಿತ ರಜೆಯ ಕೊಡುಗೆ ಮುಂದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.