ADVERTISEMENT

ಹಾಡುತ್ತಿರುವಾಗಲೇ ಕುಸಿದು ಮೃತಪಟ್ಟ ದಕ್ಷಿಣ ಆಫ್ರಿಕಾ ರ್‍ಯಾಪರ್‌ ಕೋಸ್ಟಾ ಟಿಚ್

ಏಜೆನ್ಸೀಸ್
Published 12 ಮಾರ್ಚ್ 2023, 15:48 IST
Last Updated 12 ಮಾರ್ಚ್ 2023, 15:48 IST
   

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ರ್‍ಯಾಪರ್‌ ಕೋಸ್ಟಾ ಟಿಚ್ ಪ್ರದರ್ಶನ ನೀಡುತ್ತಿದ್ದ ವೇದಿಕೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

28 ವರ್ಷದ ಕೋಸ್ಟಾ, ಜೋಹಾನ್ಸ್‌ಬರ್ಗ್ ಉಪನಗರವಾದ ನಾಸ್ರೆಕ್‌ನಲ್ಲಿ ಶನಿವಾರ ಸಂಜೆ ಅಲ್ಟ್ರಾ ಸೌತ್ ಆಫ್ರಿಕಾ ಸಂಗೀತ ಪ್ರದರ್ಶನ ನೀಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಅವರ ಸಾವಿನ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಎಎಫ್‌ಪಿಗೆ ತಿಳಿಸಿದ್ದಾರೆ.

ಕೋಸ್ಟಾ ಟಿಚ್, ‘ಬಿಗ್ ಫ್ಲೆಕ್ಸಾ’ ಗೀತೆಯಿಂದ ಜನಪ್ರಿಯರಾಗಿದ್ದರು. ಇದು ಯುಟ್ಯೂಬ್‌ನಲ್ಲಿ 45 ದಶಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.

ADVERTISEMENT

ಶನಿವಾರದ ಅವರ ಸಂಗೀತ ಕಾರ್ಯಕ್ರಮದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅವರು ಹಾಡುವ ವೇಳೆಯೇ ಒಮ್ಮೆ ಬೀಳುತ್ತಾರೆ. ನಂತರ ಮತ್ತೆ ಮೈಕ್ರೊಫೋನ್‌ ಹಿಡಿದು ಹಾಡಲು ಪ್ರಾರಂಭಿಸಿ ಮತ್ತೆ ಕುಸಿದು ಬೀಳುತ್ತಾರೆ. ಇತರ ಕಲಾವಿದರು ಅವರ ಸಹಾಯಕ್ಕೆ ಬರುತ್ತಾರೆ. ಅವರ ಬದುಕಿನ ಕೊನೆಯ ಕ್ಷಣಗಳು ಈ ವಿಡಿಯೊದಲ್ಲಿ ಸೆರೆಯಾಗಿದೆ.

ಕೋಸ್ಟಾ ಸಾವಿಗೆ ದಕ್ಷಿಣ ಆಫ್ರಿಕಾದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.