ADVERTISEMENT

ಬೆಂಗಳೂರಿನಿಂದ ಏರ್ ಇಂಡಿಯಾ ತಡೆರಹಿತ ವಿಮಾನ: ಸ್ಯಾನ್‌ ಫ್ರಾನ್ಸಿಸ್ಕೊ ಸ್ವಾಗತ

ಪಿಟಿಐ
Published 6 ಜನವರಿ 2021, 14:04 IST
Last Updated 6 ಜನವರಿ 2021, 14:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು–ಸ್ಯಾನ್ ‌ಫ್ರಾನ್ಸಿಸ್ಕೊ ನಡುವೆ ಪ್ರಪ್ರಥಮ ತಡೆರಹಿತ ವಿಮಾನಗಳನ್ನು ಕಾರ್ಯಾಚರಣೆ ನಡೆಸುವ ಏರ್‌ ಇಂಡಿಯಾ ನಿರ್ಧಾರವನ್ನು ಸ್ಯಾನ್‌ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ವಾಗತಿಸಿದೆ.

ಜ.9ರಿಂದ ಏರ್‌ಇಂಡಿಯಾ ವಾರದಲ್ಲಿ ಎರಡು ದಿನ(ಶನಿವಾರ ಹಾಗೂ ಮಂಗಳವಾರ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಡೆರಹಿತ ವಿಮಾನಗಳನ್ನು ಕಾರ್ಯಾಚರಣೆ ನಡೆಸಲಿದೆ. ಸಾನ್ ‌ಫ್ರಾನ್ಸಿಸ್ಕೊದಿಂದ ಹೊರಡುವ ವಿಮಾನವು ಸೋಮವಾರ ಮತ್ತು ಗುರುವಾರ ತಲುಪಲಿದೆ ಎಂದು ವಿಮಾನ ನಿಲ್ದಾಣವು ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟು 238 ಸೀಟುಗಳಿರುವ ಬೋಯಿಂಗ್‌777–200ಎಲ್‌ಆರ್‌ ವಿಮಾನಗಳನ್ನು ಏರ್‌ ಇಂಡಿಯಾ ಕಾರ್ಯಾಚರಣೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT