ADVERTISEMENT

ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿಯಾಗಿ ಇಮ್ರಾನ್ ಪಕ್ಷದ ನಾಯಕ ತನ್ವೀರ್ ಆಯ್ಕೆ

ಪಿಟಿಐ
Published 18 ಏಪ್ರಿಲ್ 2022, 16:03 IST
Last Updated 18 ಏಪ್ರಿಲ್ 2022, 16:03 IST
ಸರ್ದಾರ್ ತನ್ವೀರ್ ಇಲಿಯಾಸ್  (ಟ್ವಿಟರ್‌ ಚಿತ್ರ: @SardarTanveerIK)
ಸರ್ದಾರ್ ತನ್ವೀರ್ ಇಲಿಯಾಸ್ (ಟ್ವಿಟರ್‌ ಚಿತ್ರ: @SardarTanveerIK)   

ಇಸ್ಲಾಮಾಬಾದ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಪ್ರಾಂತೀಯ ಅಧ್ಯಕ್ಷ ಸರ್ದಾರ್ ತನ್ವೀರ್ ಇಲಿಯಾಸ್ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಈ ಚುನಾವಣೆಯಲ್ಲಿ ಇಲಿಯಾಸ್ ವಿರುದ್ಧ ಪ್ರತಿಪಕ್ಷಗಳಾದ ಪಿಪಿಪಿ ಮತ್ತು ಪಿಎಂಎಲ್-ಎನ್ ಪಕ್ಷಗಳು ಜಂಟಿಯಾಗಿ ಚೌಧರಿ ಯಾಸಿನ್ ಅವರನ್ನು ಕಣಕ್ಕಿಳಿಸಿದ್ದವು. ಆದರೆ, ಈ ಚುನಾವಣೆಯನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದ್ದವು. ಈ ಹಿನ್ನೆಲೆಯಲ್ಲಿ ಇಲಿಯಾಸ್ ಅವರು 33 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT