ದುಬೈ: ಟೆಹ್ರಾನ್‌ನಲ್ಲಿ ಭೂಗತ ಸುಧಾರಿತ ಕೇಂದ್ರಾಪಗಾಮಿ ಜೋಡಣಾ ಘಟಕ ನಿರ್ಮಾಣ ಆರಂಭವಾಗಿದೆ ಎಂದು ವಿಶ್ವಸಂಸ್ಥೆ ಖಚಿತಪಡಿಸಿರುವ ಬೆನ್ನಲ್ಲೇ, ಇರಾನ್ ನತಾಂಝ್ ಪರಮಾಣು ಕೇಂದ್ರದ ಬಳಿ ಪರಮಾಣು ಘಟಕದ ನಿರ್ಮಾಣ ಕಾರ್ಯ ಆರಂಭಿಸಿರುವ ಉಪಗ್ರಹ ಚಿತ್ರಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.
ಕಳೆದ ಜುಲೈನಲ್ಲಿ ನತಾಂಝ್ ಪರಮಾಣು ಕೇಂದ್ರದ ಪ್ರದೇಶದಲ್ಲಿ ಸಂಭವಿಸಿದ ವಿಧ್ವಂಸಕ ಕೃತ್ಯದ ನಂತರ ಈ ಘಟಕದ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಇರಾನ್ ವಿರುದ್ಧ ಹರಿಹಾಯ್ದಿದ್ದರು. ಇದರಿಂದ ಇರಾನ್, ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದಲ್ಲಿದ್ದ ಮಿತಿಯನ್ನು ದಾಟುವಂತೆ ಮಾಡಿದೆ. ಆದರೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡೆನ್, ಅಮೆರಿಕ – ಇರಾನ್ ಪರಮಾಣು ಒಪ್ಪಂದದ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ. ಹೀಗಾಗಿ, ಅಮೆರಿಕ ಚುನಾವಣಾ ಫಲಿತಾಂಶ ಯಾವ ಮಾರ್ಗದಲ್ಲಿ ಸಾಗುತ್ತದೆ ಎಂಬುದರ ಮೇಲೆ, ಈ ಪರಮಾಣು ಒಪ್ಪಂದ ಮುನ್ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.