ದುಬೈ: ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಮತ್ತು ಯೋಗ ಗುರು ಬಾಬಾ ರಾಮದೇವ್ ಸೇರಿದಂತೆ ಭಾರತದ ಗಣ್ಯರು ದುಬೈನಲ್ಲಿ ನಡೆಯಲಿರುವ ಜಾಗತಿಕ ಶಾಂತಿ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
‘ಯುಎಇ ಸಚಿವ ಶೇಕ್ ನಹಯಾನ್ ಮಬರಕ್ ಅಲ್ ನಹಯಾನ್ ಅವರ ನೇತೃತ್ವದಲ್ಲಿ ಏಪ್ರಿಲ್ 12–13ರಂದು ಸಮ್ಮೇಳನ ಆರಂಭಗೊಳ್ಳಲಿದೆ’ ಎಂದು ‘ಐ ಆ್ಯಮ್ ಪೀಸ್‌ಕೀಪರ್’ (ನಾನು ಶಾಂತಿದೂತ) ಚಳವಳಿಯ ಮುಖ್ಯಸ್ಥ ಡಾ.ಹುಝೈಫ ಖೋರಕಿವಾಲ ಅವರು ಘೋಷಿಸಿದ್ದಾರೆ.
‘ಒಂದು ಜಗತ್ತು, ಒಂದು ಧ್ವನಿ, ಜಾಗತಿಕ ನ್ಯಾಯ, ಪ್ರೀತಿ ಮತ್ತು ಶಾಂತಿ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಶಾಂತಿ ಸಮ್ಮೇಳನದಲ್ಲಿ 10 ಮಂದಿ ನೊಬೆಲ್ ಪುರಸ್ಕೃತರು, ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮಿಗಳು, ಸಾಂಸ್ಕೃತಿಕ ರಾಯಭಾರಿಗಳು, ಕ್ರೀಡಾ ಸಾಧಕರು ಹಾಗೂ ಶಾಂತಿ ಮತ್ತು ನ್ಯಾಯದ ಪರವಾದ ವಕೀಲರು ಸೇರಿದಂತೆ 72 ಮಂದಿ ಮಾತನಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.