ADVERTISEMENT

ದೇಶದ್ರೋಹ ಆರೋಪ: ಮೂವರು ಸೈನಿಕರಿಗೆ ಗಲ್ಲುಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 13:17 IST
Last Updated 10 ಏಪ್ರಿಲ್ 2021, 13:17 IST
d
d   

dಶತ್ರುಗಳಿಗೆ ಸಹಕರಿಸಿ ಗಂಭೀರ ದೇಶದ್ರೋಹ ಎಸಗಿದ ಆಪಾದನೆಯ ಮೇರೆಗೆ ಮೂವರು ಸೈನಿಕರನ್ನು ಸೌದಿ ಅರೇಬಿಯಾ ಶನಿವಾರ ಗಲ್ಲಿಗೇರಿಸಿದೆ.

ನ್ಯಾಯ ಸಮ್ಮತ ವಿಚಾರಣೆಯ ನಂತರ ಈ ಮೂವರಿಗೂವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಸಚಿವಾಲಯವು ‘ಶತ್ರು’ವಿನ ಹೆಸರು ಉಲ್ಲೇಖಿಸಿಲ್ಲ. ಆದರೆ, ಯೆಮೆನ್ ಗಡಿಯ ದಕ್ಷಿಣ ಪ್ರಾಂತ್ಯದಲ್ಲಿ ಅಪರಾಧಿ ಸೈನಿಕರಿಗೆ ಮರಣದಂಡನೆ ವಿಧಿಸಲಾಯಿತು ಎಂದು ಹೇಳಿದೆ. ದಕ್ಷಿಣ ಪ್ರಾಂತ್ಯದಲ್ಲಿ ಇರಾನ್ ಪ್ರಾಯೋಜಿತ ಹೌತಿ ಹೋರಾಟದ ವಿರುದ್ಧ ಸೌದಿ ಅರೇಬಿಯಾ ಆರು ವರ್ಷಗಳಿಗೂ ಹೆಚ್ಚು ಕಾಲದಿಂದ ಯುದ್ಧ ನಡೆಸುತ್ತಿದೆ.

ADVERTISEMENT

ಮರಣದಂಡನೆ, ಚಿತ್ರಹಿಂಸೆ ಮತ್ತು ಅನ್ಯಾಯದ ವಿಚಾರಣೆಗಳನ್ನು ಉಲ್ಲೇಖಿಸಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸೇರಿದಂತೆ ಮಾನವ ಹಕ್ಕುಗಳ ಸಂಘಟನೆಗಳು ಮರಣದಂಡನೆ ಶಿಕ್ಷೆ ನಿಲ್ಲಿಸುವಂತೆ ಸೌದಿ ಅರೆಬಿಯಾವನ್ನು ಒತ್ತಾಯಿಸಿವೆ.

ದೇಶದಲ್ಲಿ 2020ರಲ್ಲಿ 27 ಜನರನ್ನು ಗಲ್ಲಿಗೇರಿಸಲಾಗಿದೆ. ಹಿಂದಿನ ವರ್ಷ 185 ಜರನ್ನು ಗಲ್ಲಿಗೇರಿಸಲಾಗಿತ್ತು ಎಂದು ಸೌದಿ ಸರ್ಕಾರದ ಮಾನವ ಹಕ್ಕುಗಳ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.