ADVERTISEMENT

ಕೋವಿಡ್‌–19ಗೆ ಮದ್ದು: ಪ್ರಗತಿಯ ಹಾದಿಯಲ್ಲಿದೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 6:36 IST
Last Updated 15 ಏಪ್ರಿಲ್ 2020, 6:36 IST
   

ಬೀಜಿಂಗ್‌/ವಾಷಿಂಗ್ಟನ್‌: ಜಗತ್ತನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ಗೆ ಲಸಿಕೆ ಕಂಡುಹಿಡಿಯುವ ಹಾದಿಯಲ್ಲಿ ಸಾಗಿರುವಚೀನಾ ಮತ್ತು ಅಮೆರಿಕಕ್ರಮಿಸಬೇಕಾದ ದಾರಿ ಇನ್ನೂ ದೂರ ಇದೆ ಎಂದು ವರದಿಯಾಗಿವೆ.

ಈ ಎರಡು ದೇಶಗಳು ಮೂರು ಮಾದರಿಯ ಲಸಿಕೆಗಳನ್ನು ವಿವಿಧ ಹಂತಗಳಲ್ಲಿ ಪರೀಕ್ಷೆ ಮಾಡಿವೆ. ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗಿದ್ದು ಆ ವ್ಯಕ್ತಿಯ ಮೇಲೆ ನಿಗಾ ವಹಿಸಲಾಗಿದೆ ಎಂದು ಉಭಯ ದೇಶಗಳ ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಕ್ಯಾನ್‌ಸಿನೊ ಬಯೋಲಾಜಿಕ್‌ ಸಂಸ್ಥೆಯು ಎರಡನೇ ಹಂತದ ಪರೀಕ್ಷೆಯನ್ನು ಆರಂಭಿಸಿದೆ. ಮಂಗಳವಾರ ಸೋಂಕಿತ ವ್ಯಕ್ತಿಗೆ ಎರಡನೇ ಲಸಿಕೆ ಹಾಕಲಾಗಿದೆ ಎಂದು ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ.

ADVERTISEMENT

ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್‌) ಸಹ ಎರಡನೇ ಹಂತದ ಪರೀಕ್ಷೆಯನ್ನು ನಡೆಸಿದೆ. ಕಳೆದ ತಿಂಗಳು ಸೋಂಕಿತ ವ್ಯಕ್ತಿಗೆ ಮೊದಲನೇ ಹಂತದ ಲಸಿಕೆಯನ್ನು ಹಾಕಲಾಗಿತ್ತು. ನಿನ್ನೆ ಎರಡನೇ ಹಂತದ ಲಸಿಕೆಯನ್ನು ಆ ವ್ಯಕ್ತಿಗೆ ನೀಡಲಾಗಿದೆ.

ಲಸಿಕೆಯ ಬಗ್ಗೆ ಈಗಲೇ ಏನನ್ನು ಹೇಳಲಾಗದು, ಇನ್ನೂಹಲವು ಹಂತಗಳಲ್ಲಿ ಪರೀಕ್ಷೆನಡೆಸಬೇಕಿದೆ. ಮುಂದಿನ ಹಂತದ ಪರೀಕ್ಷೆಯನ್ನು ಜೂನ್‌ ತಿಂಗಳಲ್ಲಿ ನಡೆಸಲಾಗುವುದು ಎಂದು ಎನ್‌ಐಎಚ್‌ನ ಹಿರಿಯ ಸಂಶೋಧನಾ ವೈದ್ಯ ಆ್ಯಂಟೋನಿ ಫಿಯ್ಸಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.