ADVERTISEMENT

ರೋಮ್‌: ಏಳು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ನಾಪತ್ತೆ

ಏಜೆನ್ಸೀಸ್
Published 10 ಜೂನ್ 2022, 11:21 IST
Last Updated 10 ಜೂನ್ 2022, 11:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರೋಮ್‌: ಪೈಲಟ್‌ ಸೇರಿ ಏಳು ಮಂದಿ ಇದ್ದ ಹೆಲಿಕಾಪ್ಟರ್ ಶುಕ್ರವಾರ ಇಟಲಿಯಲ್ಲಿ ನಾಪತ್ತೆಯಾಗಿದ್ದು, ಅದಕ್ಕಾಗಿ ಶೋಧ ಕಾರ್ಯ ನಡೆದಿದೆ ಎಂದು ಅಲ್ಪೈನ್‌ ರಕ್ಷಣಾ ಸೇವೆಯ ವಕ್ತಾರರು ತಿಳಿಸಿದ್ದಾರೆ.

ಲೆಬನೈಸ್‌ನ ನಾಲ್ವರು, ಟರ್ಕಿಯೆಯ ಇಬ್ಬರು ಪ್ರಜೆಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇದು, ಇಟಲಿಯ ಉತ್ತರ ಭಾಗದಲ್ಲಿನ ಬೆಟ್ಟ ಪ್ರದೇಶದಲ್ಲಿ ಹೆಲಿಕಾಪ್ಟರ್‌ ನಾಪತ್ತೆಯಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ವಾಯುಪಡೆ, ಪೊಲೀಸ್‌, ವೈದ್ಯಕೀಯ ನೆರವು ಸೇವೆ ಸೇರಿದಂತೆ ಒಟ್ಟು 7 ಹೆಲಿಕಾಪ್ಟರ್‌ಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ಕಾಡಿನ ಪ್ರದೇಶವಾದ್ದರಿಂದ ಶೋಧ ಕಾರ್ಯ ಕಷ್ಟವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.