ADVERTISEMENT

ಮಂಗೋಲಿಯಾದಲ್ಲಿ ಪ್ಲೇಗ್‌ಗೆ ಮತ್ತೊಂದು ಸಾವು

ಏಜೆನ್ಸೀಸ್
Published 8 ಆಗಸ್ಟ್ 2020, 19:54 IST
Last Updated 8 ಆಗಸ್ಟ್ 2020, 19:54 IST

ಬೀಜಿಂಗ್‌: ಚೀನಾದ ಉತ್ತರ ಭಾಗದಲ್ಲಿರುವ ಮಂಗೋಲಿಯಾದಲ್ಲಿ ಪ್ಲೇಗ್‌ಗೆ ಮತ್ತೊಬ್ಬ ರೋಗಿ ಮೃತಪಟ್ಟಿದ್ದಾರೆ.

ಬ್ಯುಬೋನಿಕ್‌ ಪ್ಲೇಗ್‌ನಿಂದ ಈ ವಾರದಲ್ಲಿ ಸಂಭವಿಸಿದ ಎರಡನೇ ಸಾವು ಇದಾಗಿದೆ. ಈ ಸೋಂಕಿಗೆ ಒಳಗಾಗಿದ್ದ ರೋಗಿಯೊಬ್ಬರು ಬಹುಅಂಗಾಗ ವೈಫಲ್ಯದಿಂದ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಬಯಾನೋರ್‌ ನಗರ ಆರೋಗ್ಯ ಆಯುಕ್ತರು ತಿಳಿಸಿದ್ದಾರೆ.

ಮೃತಪಟ್ಟ ರೋಗಿ ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದ್ದು, ರೋಗಿಯ ಜೊತೆ ಸಂಪರ್ಕವಿದ್ದ ಏಳು ಜನರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.ಸಂಪರ್ಕದಲ್ಲಿ ಇದ್ದವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್‌ ಬಂದಿದ್ದು, ಅವರಿಗೆ ಸೋಂಕಿನ ಲಕ್ಷಣಗಳು ಇಲ್ಲ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.