ADVERTISEMENT

ಅಮೆರಿಕ:ತಾತ್ಕಾಲಿಕ ಧನ ಸಹಾಯ ಮಸೂದೆಗೆ ಟ್ರಂಪ್ ಸಹಿ

ಏಜೆನ್ಸೀಸ್
Published 1 ಅಕ್ಟೋಬರ್ 2020, 6:33 IST
Last Updated 1 ಅಕ್ಟೋಬರ್ 2020, 6:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌ : ಡಿಸೆಂಬರ್ 11ರವರೆಗೆ ಸರ್ಕಾರ ನಡೆಸಲು ನೆರವಾಗುವ ತಾತ್ಕಾಲಿಕ ಧನಸಹಾಯ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಸ ಸಹಿ ಹಾಕಿದ್ದಾರೆ.

ಈ ಮೂಲಕ ಗುರುವಾರದಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿ, ಸರ್ಕಾರದ ಕಾರ್ಯಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆಯನ್ನು ತಪ್ಪಿಸಿದಂತಾಗಿದೆ.

ಈ ತಾತ್ಕಾಲಿಕ ಉಭಯ ಪಕ್ಷೀಯ ಧನ ಸಹಾಯ ಮಸೂದೆ ಸೆನೆಟ್‌ನಲ್ಲಿ ಬುಧವಾರ 84–10 ಮತಗಳಿಂದ ಅಂಗೀಕೃತಗೊಂಡಿತ್ತು. ಇದನ್ನು ಅಧ್ಯಕ್ಷ ಟ್ರಂಪ್ ಅವರ ಸಹಿಗಾಗಿ ಕಳುಹಿಸಲಾಗಿತ್ತು. ಮಿನೆಸೊಟಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅವರು ತುರ್ತಾಗಿ ವಾಷಿಂಗ್ಟನ್‌ಗೆ ವಾಪಾಸಾಗಿ ಗುರುವಾರ ಮಸೂದೆಗೆ ಸಹಿ ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.