ADVERTISEMENT

ಉತ್ತರ ಕೊರಿಯಾದಲ್ಲಿ ಸಂಶಯಾಸ್ಪದ ಚಟುವಟಿಕೆಗಳಿಲ್ಲ: ದಕ್ಷಿಣ ಕೊರಿಯಾ

ಕಿಮ್‌ ಜಾಂಗ್‌ ಉನ್‌ ಆರೋಗ್ಯ ಸ್ಥಿತಿ ಗಂಭೀರ ವದಂತಿ ಹಿನ್ನೆಲೆ

ಏಜೆನ್ಸೀಸ್
Published 21 ಏಪ್ರಿಲ್ 2020, 15:08 IST
Last Updated 21 ಏಪ್ರಿಲ್ 2020, 15:08 IST
ಕಿಮ್‌ ಜಾಂಗ್‌ ಉನ್‌
ಕಿಮ್‌ ಜಾಂಗ್‌ ಉನ್‌   

ಸೋಲ್‌: ‘ಉತ್ತರ ಕೊರಿಯಾದಲ್ಲಿ ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಾಣಿಸುತ್ತಿಲ್ಲ’ ಎಂದು ದಕ್ಷಿಣ ಕೊರಿಯಾ ಮಂಗಳವಾರ ತಿಳಿಸಿದೆ.

ಹೃದಯದ ಶಸ್ತ್ರಚಿಕಿತ್ಸೆ ಬಳಿಕ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷರ ಭವನವು, ‘ಕಿಮ್‌ ಆರೋಗ್ಯದ ಕುರಿತ ವದಂತಿ ಕುರಿತು ಯಾವುದೇ ಮಾಹಿತಿ ಇಲ್ಲ. ಉತ್ತರ ಕೊರಿಯಾದೊಳಗೆ ಯಾವುದೇ ಸಂಶಯಾಸ್ಪದ ಚಟುವಟಿಕೆಗಳೂ ಗಮನಕ್ಕೆ ಬಂದಿಲ್ಲ’ ಎಂದು ಬ್ಲ್ಯೂ ಹೌಸ್‌(ಅಧ್ಯಕ್ಷರ ಭವನ)ವಕ್ತಾರ ಕಾಂಗ್‌ ಮಿನ್‌ ಸಿಓಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ 15ರಂದುರಾಷ್ಟ್ರದ ಸಂಸ್ಥಾಪಕ, ತಾತ ದಿವಂಗತ ಕಿಮ್‌ ಸಂಗ್‌ ಅವರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೂ ಕಿಮ್‌ ಜಾಂಗ್‌ ಉನ್‌ ಗೈರಾಗಿರುವುದು ವದಂತಿಗೆ ಪುಷ್ಠಿ ನೀಡಿದೆ.

ADVERTISEMENT

‘ಕಿಮ್‌ ಆರೋಗ್ಯದ ಕುರಿತು ಸೋಮವಾರ ವರದಿ ಪ್ರಕಟವಾಗುವುದಕ್ಕೆ ಮೊದಲೇ ಕಿಮ್‌ ಶಸ್ತ್ರಚಿಕಿತ್ಸೆಯ ಬಗ್ಗೆ ಶ್ವೇತಭವನಕ್ಕೆ ಮಾಹಿತಿ ದೊರಕಿತ್ತು. ಶಸ್ತ್ರಚಿಕಿತ್ಸೆ ಮತ್ತು ನಂತರದ ಪರಿಣಾಮದ ಬಗ್ಗೆ ನಮ್ಮ ಬಳಿ ಯಾವುದೇ ಅಧಿಕೃತ ಸಾಕ್ಷ್ಯಗಳಿಲ್ಲ’ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.

ಅನಾಮಧೇಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿಈ ಕುರಿತು ಸಿಎನ್‌ಎನ್‌ ಮೊದಲು ವರದಿ ಮಾಡಿದೆ. ‘ಚಿಕಿತ್ಸೆಯ ಬಳಿಕ ಕಿಮ್‌ ಆರೋಗ್ಯ ಸ್ಥಿತಿ ಹದಗೆಟ್ಟಿರುವುದು ಖಚಿತವಾಗಿದ್ದು, ಗಂಭೀರತೆ ಬಗ್ಗೆ ಮಾಹಿತಿ ಇಲ್ಲ’ ಎಂದು ಅಧಿಕಾರಿ ಸಿಎನ್‌ಎನ್‌ಗೆ ತಿಳಿಸಿದ್ದಾರೆ.

‘ಹೃದಯ ಶಸ್ತ್ರಚಿಕಿತ್ಸೆ ಬಳಿಕ ಉತ್ತರ ಕೊರಿಯಾ ರಾಜಧಾನಿ ಪ್ಯಾನ್‌ಯಾಂಗ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ’ ಎಂದು ಅನಾಮಧೇಯ ಮೂಲವನ್ನು ಉಲ್ಲೇಖಿಸಿ ಆನ್‌ಲೈನ್‌ ಪತ್ರಿಕೆ ‘ಡೈಲಿ ಎನ್‌ಕೆ’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.