ADVERTISEMENT

ಬಡ ರಾಷ್ಟ್ರಗಳಿಗೆ ನ್ಯುಮೋನಿಯಾ ಲಸಿಕೆ ಪೂರೈಕೆ

ಪುಣೆ ಮೂಲದ ಎಸ್‌ಐಐ, ಯುನಿಸೆಫ್‌ ನಡುವೆ ಒಪ್ಪಂದ

ಪಿಟಿಐ
Published 17 ಜೂನ್ 2020, 7:11 IST
Last Updated 17 ಜೂನ್ 2020, 7:11 IST
pneumonia vaccine
pneumonia vaccine   

ವಿಶ್ವಸಂಸ್ಥೆ: ಬಡ ರಾಷ್ಟ್ರಗಳಿಗೆ ನ್ಯುಮೋನಿಯಾ ವಿರುದ್ಧದ ಲಸಿಕೆಯನ್ನು ಪೂರೈಕೆ ಮಾಡುವ ಸಂಬಂಧ ಪುಣೆ ಮೂಲದ ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಹಾಗೂ ಯುನಿಸೆಫ್‌ ಒಪ್ಪಂದ ಮಾಡಿಕೊಂಡಿವೆ.

ಕಡಿಮೆ ಆದಾಯ ಇರುವ ಈ ರಾಷ್ಟ್ರಗಳಲ್ಲಿ ನ್ಯುಮೋನಿಯಾದಿಂದಾಗಿ ಬಹಳಷ್ಟು ಸಂಖ್ಯೆಯಲ್ಲಿ ಮಕ್ಕಳು ಸಾವನ್ನಪ್ಪುತ್ತಿವೆ. ಹೀಗಾಗಿ, ಈ ದೇಶಗಳಿಗೆ ಪ್ರತಿ ವರ್ಷ ಒಂದು ಕೋಟಿ ಲಸಿಕೆ (ನ್ಯುಮೋಕಾಕಲ್‌ ಕಾಂಜುಗೇಟ್‌ ವ್ಯಾಕ್ಸಿನ್‌) ಪೂರೈಸುವ ಸಂಬಂಧ ಈ ಒಪ್ಪಂದ ಏರ್ಪಟ್ಟಿದೆ.

ಎಸ್‌ಐಐ ವಿವಿಧ ಕಾಯಿಲೆಗಳ ಲಸಿಕೆ ಹಾಗೂ ಔಷಧಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

ADVERTISEMENT

‘ನ್ಯುಮೋನಿಯಾದಿಂದ ಪ್ರತಿ 39 ಸೆಕೆಂಡ್‌ಗೆ ಒಂದು ಮಗು ಸಾಯುತ್ತಿದೆ. ಅತಿ ಕಡಿಮೆ ದರದಲ್ಲಿ ಲಸಿಕೆ ಪೂರೈಸಿದ್ದೇ ಆದಲ್ಲಿ ಲಕ್ಷಾಂತರ ಮಕ್ಕಳ ಜೀವ ಉಳಿಸಲು ಸಾಧ್ಯ’ ಎಂದು ಯುನಿಸೆಫ್‌ನ ಖರೀದಿ ಮತ್ತು ಪೂರೈಕೆ ಕೇಂದ್ರದ ನಿರ್ದೇಶಕರಾದ ಎಟ್ಲೆವಾ ಕಡಿಲ್ಲಿ ಹೇಳಿದ್ದಾರೆ.

‘ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳು ದುಬಾರಿ ಎಂಬ ಕಾರಣಕ್ಕಾಗಿ ಈ ಲಸಿಕೆಯನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸಿಲ್ಲ. ಈಗ ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಿರುವ ಕಾರಣ, ಮಕ್ಕಳಿಗೆ ಈ ಲಸಿಕೆಯನ್ನು ನೀಡುವ ಕಾರ್ಯವನ್ನು ಚುರುಕುಗೊಳಿಸಲು ಸಾಧ್ಯವಾಗಲಿದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.